Skip to main content


ಬಹುಭಾಷಾ ನಟಿ ಸಿಂಧು ಮೆನನ್ ವಿರುದ್ದ ಎಫ್‌ಐಆರ್

ನಕಲಿ ದಾಖಲೆಗಳನ್ನು ನೀಡಿ ಸಾಲ ಪಡೆದು ಬರೋಡ ಬ್ಯಾಂಕಿಗೆ ವಂಚನೆ ಮಾಡಿರುವ ಆರೋಪದಲ್ಲಿ ಬಹುಭಾಷಾ ನಟಿ ಸಿಂಧು ಮೆನನ್ ಮತ್ತು ಸಹೋದರ ಸೇರಿದಂತೆ ಹಲವರ ಮೇಲೆ ಪ್ರಕರಣ ದಾಖಲಾಗಿದೆ.
ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್ ಆಫ್ ಬರೋಡಗೆ 36 ಲಕ್ಷ ರೂ. ವಂಚನೆಗೈದ ಆರೋಪದ ಮೇಲೆ ಸಿಂಧು ಮೆನನ್ ಸೇರಿದಂತೆ ನಾಲ್ವರ ವಿರುದ್ಧ ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 420 ಅಡಿಯಲ್ಲಿ ಪ್ರಕರಣ ಎಫ್‍ಐಆರ್ ದಾಖಲಾಗಿದೆ. ಪ್ರಕರಣದಲ್ಲಿ ಸಿಂಧೂ ಮೆನನ್​ರ ಸಹೋದರ ಮನೋಜ್​ ಕಾರ್ತಿಕೇಯನ್​ ವರ್ಮ ಮೊದಲ ಆರೋಪಿಯಾಗಿದ್ದು ಹಾಗೂ 2ನೇ ಆರೋಪಿ ನಾಗಶ್ರೀ ಶಿವಣ್ಣ ಎಂಬುವವರನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ.  

Short by : Pawanraj / read more at Karavali Karnataka