Skip to main content


ಶಾಕಿಂಗ್! ಪೊಲೀಸ್ ಠಾಣೆ ಟೆರೆಸ್ ಮೇಲೆ ವಿದೇಶಿ ಜೋಡಿಯ ಕಾಮಕೇಳಿ

ಉದಯಪುರದ ಪೊಲೀಸ್ ಠಾಣೆಯೊಂದರ ಟೆರೆಸ್ ಮೇಲೆ ವಿದೇಶಿ ಜೋಡಿ ಸೆಕ್ಸ್ ಮಾಡ್ತಿರೋ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಘಂಟಾಘರ್  ಪೊಲೀಸ್ ಠಾಣೆಯ ಟೆರೆಸ್ ಮೇಲೆ ನಡೆದ ಕೃತ್ಯ ಇದು.
ಠಾಣೆಯ ಸಮೀಪದಲ್ಲಿರುವ ಕಟ್ಟಡದ ಮೇಲೆ ನಿಂತು ಯಾರೋ ಈ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ವಿಡಿಯೋದಲ್ಲಿರುವ ಯುವ ಜೋಡಿಯ ವಿವರಗಳು ಇದುವರೆಗೂ ಲಭ್ಯವಾಗಿಲ್ಲ.
ಕಟ್ಟಡದ ಟೆರೆಸ್ ಮೇಲೆ ತೆರಳಲು ಪೊಲೀಸ್ ಠಾಣೆಯ ಒಳಗಿನಿಂದ್ಲೇ ಹೋಗಬೇಕು. ಹಾಗಾಗಿ ಈ ವಿದೇಶಿ ಜೋಡಿ ಟೆರೆಸ್ ಮೇಲಕ್ಕೆ ತಲುಪಿದ್ಹೇಗೆ ಅನ್ನೋ ಪ್ರಶ್ನೆಯೆದ್ದಿದೆ.
ಆದ್ರೆ ಎಸ್ಪಿ ರಾಜೇಂದ್ರ ಪ್ರಸಾದ್ ಗೋಯಲ್ ಮಾತ್ರ ಈ ಘಟನೆಯಲ್ಲಿ ಪೊಲೀಸರ ಪಾತ್ರವಿಲ್ಲ ಎಂದಿದ್ದಾರೆ. ಈ ವಿಡಿಯೋ ಅಧಿಕೃತವೆಂದು ನಂಬಲು ಸಾಧ್ಯವಿಲ್ಲ ಅಂತಾನೂ ಹೇಳಿದ್ದಾರೆ.
short by: Nithin