Skip to main content


ಸೌತ್ ಸಿನಿಲೋಕದಲ್ಲಿ ಯಾವ ನಟನ ಎತ್ತರ ಎಷ್ಟಿದೆ?

ಒಬ್ಬ ನಟ ಹೀರೋ ಆಗ್ಬೇಕು ಅಂದ್ರೆ, ಒಳ್ಳೆ ಹೈಟ್, ಪರ್ಸನಾಲಿಟಿ ಇರಬೇಕು ಎನ್ನುವುದು ಸಾಮಾನ್ಯ. ಅದಕ್ಕೆ ತಕ್ಕಂತೆ ನಮ್ಮ ನಾಯಕರು ಕೂಡ ಫಿಟ್ನೆಸ್ ಕಾಪಾಡಿಕೊಂಡಿರುತ್ತಾರೆ. ಸೌತ್ ಇಂಡಸ್ಟ್ರಿಯಲ್ಲಿ ಅತಿ ಹೆಚ್ಚು ಹೈಟ್ ಇರೋದು ಯಾವ ನಟ? ಹಾಗಿದ್ರೆ, ಬನ್ನಿ ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಇಂಡಸ್ಟ್ರಿಯಲ್ಲಿ ಯಾವ ನಟನ ಎತ್ತರ ಎಷ್ಟಿದೆ ಎಂಬುದನ್ನ ನೋಡೋಣ. 

ಕನ್ನಡದ ಕುತುಬ್ ಮಿನರ್, ಸ್ಯಾಂಡಲ್ ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕನ್ನಡದಲ್ಲಿ ಅತಿ ಎತ್ತರ ಇರುವ ನಟ. ಇವರ ಎತ್ತರ 6.3 ಅಡಿ. 

ಆರಡಿ ಕಟೌಟ್, ದಕ್ಷಿಣ ಭಾರತದ ಸೂಪರ್ ಸ್ಟಾರ್ ನಟ ಅಭಿನಯ ಚಕ್ರವರ್ತಿಯ ಎತ್ತರ 6.2 ಅಡಿ.

ಟಾಲಿವುಡ್ ನಟರಲ್ಲಿ ಪ್ರಭಾಸ್ ಎತ್ತರ 6.2 ಅಡಿ. ಪ್ರಿನ್ಸ್ ಮಹೇಶ್ ಬಾಬು ಅವರ ಎತ್ತರ 6.1 ಅಡಿ. ಬಾಹುಬಲಿ ಚಿತ್ರದಲ್ಲಿ ಪ್ರಭಾಸ್ ರಂತೆ ಹೆಚ್ಚು ಗಮನ ಸೆಳೆದ ನಟ ರಾಣಾ ದಗ್ಗುಬಾಟಿ ಎತ್ತರ 6.3 ಅಡಿ. ಫಿದಾ' ಚಿತ್ರದ ಮೂಲಕ ಟಾಲಿವುಡ್ ಬಾಕ್ಸ್ ಆಫೀಸ್ ನಲ್ಲಿ ಹೊಸ ಸಂಚಲನ ಸೃಷ್ಟಿಸಿದ ನಟ ವರುಣ್ ತೇಜ ಎತ್ತರ 6.4 ಅಡಿ. ತಮಿಳಿನ ಸೂಪರ್ ಸ್ಟಾರ್ ನಟರ ಎತ್ತರ ಬಹುತೇಕ 6 ಅಡಿಗಿಂತ ಕಡಿಮೆ ಇದೆ. ಆದ್ರೆ, ಯವನ ನಟ ಜೀವನ್ 6.2 ಅಡಿ. ಬಾಹುಬಲಿ ಚಿತ್ರದಲ್ಲಿ ಕಟ್ಟಪ್ಪನ ಪಾತ್ರ ನಿರ್ವಹಿಸಿದ್ದ ಸತ್ಯರಾಜ್ ಕೂಡ 6.2 ಅಡಿ ಎತ್ತರ ಇದ್ದಾರೆ. ಮಲಯಾಳಂನ ಹ್ಯಾಂಡ್ ಸಮ್ ನಟ ದುಲ್ಕರ್ ಸಲ್ಮಾನ್ ಅವರು 6 ಅಡಿ ಎತ್ತರ ಇದ್ದಾರೆ. ಅವರನ್ನ ಹೊರತು ಪಡಿಸಿ, ಮೊಮ್ಮಟಿ, ಮೋಹನ್ ಲಾಲ್ ಅವರು ಹೈಟ್ 5.9 ಅಡಿ ಇದ್ದಾರೆ.

short by Pawan / read more at Filmibeat


Comments