Skip to main content


ಆಸ್ಟ್ರೇಲಿಯಾ ಜಯಭೇರಿ

ಡೆಲಿಸಾ ಕಿಮ್ಮಿನ್ಸ್‌ (20ಕ್ಕೆ3) ಮತ್ತು ಮೇಗನ್‌ ಶೂಟ್‌ (13ಕ್ಕೆ2) ಅವರ ಪರಿಣಾಮಕಾರಿ ಬೌಲಿಂಗ್‌ ಬಲದಿಂದ ಆಸ್ಟ್ರೇಲಿಯಾ ಮಹಿಳಾ ತಂಡ ತ್ರಿಕೋನ ಟ್ವೆಂಟಿ–20 ಕ್ರಿಕೆಟ್‌ ಸರಣಿಯ ಪಂದ್ಯದಲ್ಲಿ 8 ವಿಕೆಟ್‌ಗಳಿಂದ ಇಂಗ್ಲೆಂಡ್‌ ತಂಡವನ್ನು ಸೋಲಿಸಿದೆ. 

ಬ್ರೆಬೊರ್ನ್‌ ಕ್ರೀಡಾಂಗಣದಲ್ಲಿ ಬುಧವಾರ ಮೊದಲು ಬ್ಯಾಟ್‌ ಮಾಡಿದ ಇಂಗ್ಲೆಂಡ್‌ 17.4 ಓವರ್‌ಗಳಲ್ಲಿ 96ರನ್‌ಗಳಿಗೆ ಆಲೌಟ್‌ ಆಯಿತು. ಸುಲಭ ಗುರಿಯನ್ನು ಆಸ್ಟ್ರೇಲಿಯಾ 11.3 ಓವರ್‌ಗಳಲ್ಲಿ 2 ವಿಕೆಟ್‌ ಕಳೆದುಕೊಂಡು ಮುಟ್ಟಿತು. 

ಬ್ಯಾಟಿಂಗ್‌ ಆರಂಭಿಸಿದ ಇಂಗ್ಲೆಂಡ್‌ ತಂಡಕ್ಕೆ ಮೊದಲ ಓವರ್‌ನಲ್ಲಿ ಆಘಾತ ಎದುರಾಯಿತು. ಅಲೈಸ್‌ ಡೇವಿಡ್‌ಸನ್‌ ರಿಚರ್ಡ್ಸ್‌ (24; 24ಎ, 2ಬೌಂ) ತಾಳ್ಮೆಯ ಆಟ ಆಡಿ ತಂಡ 90ರ ಗಡಿ ಮುಟ್ಟುವಂತೆ ನೋಡಿಕೊಂಡರು. ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ 12ರನ್‌ಗಳಿಗೆ ಎರಡು ವಿಕೆಟ್‌ ಕಳೆದುಕೊಂಡಿತ್ತು. ಎಲಿಸೆ ಪೆರಿ (ಔಟಾಗದೆ 47; 32ಎ, 9ಬೌಂ) ಮತ್ತು ನಾಯಕಿ ಮೆಗ್‌ ಲ್ಯಾನಿಂಗ್‌ (ಔಟಾಗದೆ 41; 28ಎ, 8ಬೌಂ) ಮಿಂಚಿನ ಆಟ ಆಡಿ ತಂಡವನ್ನು ಜಯದ ದಡ ಮುಟ್ಟಿಸಿದರು.

ಸಂಕ್ಷಿಪ್ತ ಸ್ಕೋರ್‌: 

ಇಂಗ್ಲೆಂಡ್‌:17.4 ಓವರ್‌ಗಳಲ್ಲಿ 96. ಆಸ್ಟ್ರೇಲಿಯಾ:11.3 ಓವರ್‌ಗಳಲ್ಲಿ 2 ವಿಕೆಟ್‌ಗೆ 97 
              

short by Prajwal / read more at Prajavani

Comments