Skip to main content


ಅನೈತಿಕ ಚಟುವಟಿಕೆ ತಾಣವಾದ ಶಹಾಪೂರ ತಾಲೂಕಿನ ಸಗರ ಬಸ್ ನಿಲ್ದಾಣ

ತಾಲೂಕಿನ ಸಗರ ಗ್ರಾಮದ ಸಾರಿಗೆ ಬಸ್ ನಿಲ್ದಾಣ ಸಂಪೂರ್ಣ ಬಳಕೆಯಾಗದೆ ನಿರುಪಯುಕ್ತವಾಗಿದೆ. ಸರ್ಕಾರ ಕೋಟ್ಯಾಂತರ ರೂ. ಖರ್ಚು ಮಾಡಿ ನಿರ್ಮಿಸಲಾಗಿರುವ ನಿಲ್ದಾಣ ಸದ್ಯ ಈಗ ಕುಡುಕರಿಗೆ ದಾಭಾ ಆಗಿ ಮಾರ್ಪಟ್ಟಿದೆ.
ನಿಲ್ದಾಣದಲ್ಲಿ ಕುಡಿಯುವ ನೀರು, ಆಸನಗಳ ವ್ಯವಸ್ಥೆಯಿಲ್ಲದೆ ಪ್ರಯಾಣಿಕರು ಪರದಾಡುವಂತಾಗಿದೆ.   ರಾತ್ರಿಯಾಗುತ್ತಿದ್ದಂತೆ ಬಸ್ ನಿಲ್ದಾಣದಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ.  ನಿಲ್ದಾಣದ ಆವರಣದ ಎಲ್ಲೆಂದರಲ್ಲಿ ಮದ್ಯದ ಬಾಟಲಿಗಳು ಕಾಣಿಸುತ್ತಿವೆ. ಪ್ರಯಾಣಿಕರು, ವಿದ್ಯಾರ್ಥಿಗಳು ಬಸ್ ನಿಲ್ದಾಣದಲ್ಲಿ ಕುಳಿತುಕೊಳ್ಳಲಾದಂತಹ ದುಸ್ಥಿತಿ ಎದುರಾಗಿದೆ.     
short by: NP / read more at Udayanadu.com