Skip to main content


ಬಟ್ಟೆ ಬಿಚ್ಚಿ ತಪಾಸಣೆ ನಡೆಸಿದ್ರು, ಸ್ಯಾನಿಟರಿ ಪ್ಯಾಡ್ ಕೂಡ ತೆಗೆದ್ರು!

ಚೆನ್ನೈನಲ್ಲಿ ಸ್ಪೈಸ್ ಜೆಟ್ ಏರ್ಲೈನ್ಸ್ ಗಗನಸಖಿಯರು ಪ್ರತಿಭಟನೆ ನಡೆಸಿದ್ದಾರೆ. ಶನಿವಾರ ಬೆಳಿಗ್ಗೆ ಗಗನ ಸಖಿಯರು ಭದ್ರತೆ ಹೆಸರಿನಲ್ಲಿ ನಡೆಯುತ್ತಿರುವ ಶೋಷಣೆ ವಿರುದ್ಧ ಪ್ರತಿಭಟನೆಗಿಳಿದಿದ್ದರು. ತಪಾಸಣೆ ಹೆಸರಿನಲ್ಲಿ ಬಟ್ಟೆ ಬಿಚ್ಚಿಸಲಾಗಿದೆ ಎಂದು ಗಗನಸಖಿಯರು ಆರೋಪ ಮಾಡಿದ್ದಾರೆ.

ಕಳೆದ ಕೆಲ ದಿನಗಳಿಂದ ವಿಮಾನ ಡಿ-ಬೋರ್ಡ್ ಆಗ್ತಿದ್ದಂತೆ ತಪಾಸಣೆ ಹೆಸರಿನಲ್ಲಿ ಬಟ್ಟೆ ಬಿಚ್ಚಿಸಲಾಗ್ತಿದೆ. ಭದ್ರತಾ ಸಿಬ್ಬಂದಿ ಗಗನಸಖಿಯರ ಹ್ಯಾಂಡ್ ಬ್ಯಾಗ್ ನಲ್ಲಿರುವ ಸ್ಯಾನಿಟರಿ ಪ್ಯಾಡ್ ತೆಗೆಯುವಂತೆ ಹೇಳಿದ್ದಾರೆ. ತಪಾಸಣೆ ಹೆಸರಿನಲ್ಲಿ ಭದ್ರತಾ ಸಿಬ್ಬಂದಿ ಕೆಟ್ಟದಾಗಿ ನಡೆದುಕೊಳ್ತಿದ್ದಾರೆಂದು ಗಗನಸಖಿಯರು ಆರೋಪ ಮಾಡಿದ್ದಾರೆ.
ಪ್ರತಿಭಟನೆ ನಂತ್ರ ಸ್ಪೈಸ್ ಜೆಟ್ ಆಡಳಿತ ಮಂಡಳಿ ಸೋಮವಾರ ಗುರಗಾಂವ್ ಕಚೇರಿಯಲ್ಲಿ ಉನ್ನತ ಮಟ್ಟದ ಸಭೆ ನಡೆಸುವುದಾಗಿ ಭರವಸೆ ನೀಡಿದೆ.

ಭದ್ರತಾ ಸಿಬ್ಬಂದಿ ಬಟ್ಟೆ ಬಿಚ್ಚಿ ತಪಾಸಣೆ ನಡೆಸುತ್ತಾರೆ. ನಗ್ನ ಸ್ಥಿತಿಯಲ್ಲಿದ್ದ ನನ್ನ ದೇಹವನ್ನು ಟಚ್ ಮಾಡಿ ಮುಜುಗರವುಂಟು ಮಾಡಿದ್ದಾರೆಂದು ಮಹಿಳೆಯೊಬ್ಬಳು ಆರೋಪ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

short by: Nithin /read more at ಕನ್ನಡದುನಿಯಾ

Comments