Skip to main content


ಬಾರಿ ಮಳೆ, ಜನ ಸಾಮಾನ್ಯರಿಗೆ ತೊಂದರೆ

ತಾಲೂಕಿನಾದ್ಯಂತ ಬುಧವಾರ ಸಂಜೆ ಸುಮಾರು ಎರಡು ತಾಸುಗಳ ಕಾಲ ಬಿರುಗಾಳಿ ಸಹಿತ ಭಾರೀ ಮಳೆಯಾಗಿದ್ದು, ಬಿಸಿಲಿನ ಬೇಗೆಯಿಂದ ಬಸವಳಿದಿದ್ದ ಜನತೆಗೆ ಕೊಂಚ ತಂಪಿನ ಸಿಂಚನವಾಗಿದೆ. ಆದರೆ ಬಿ ಸಿ ರೋಡಿನ ಜನತೆ ಮಳೆಯ ತಂಪಿನ ಮಜಾ ಅನುಭವಿಸುವ ಬದಲು ವ್ಯವಸ್ಥೆಯ ಅವ್ಯವಸ್ಥೆಗೆ ಹಿಡಿಶಾಪ ಹಾಕುತ್ತಿರುವುದು ಕೇಳಿ ಬಂತು.
ರಸ್ತೆಯನ್ನು ಆಕ್ರಮಿಸಿ ಹರಿದ ಮಳೆ ನೀರು ಬಹುತೇಕ ಅಂಗಡಿ-ಮುಂಗಟ್ಟುಗಳ ಒಳಗೂ ಪ್ರವೇಶಿಸಿದ ಪರಿಣಾಮ ಅಂಗಡಿ ಮಾಲಕರು ಕೂಡಾ ತೀವ್ರ ಬವಣೆಪಡುತ್ತಿದ್ದ ದೃಶ್ಯ ಕಂಡುಬಂತು. ಇದೂ ಅಲ್ಲದೆ ಫ್ಲೈ ಓವರ್ ಮೇಲ್ಭಾಗದಲ್ಲಿ ವಾಹನಗಳು ಸಂಚರಿಸುವ ವೇಳೆ ಭಾರೀ ಪ್ರಮಾಣದಲ್ಲಿ ನೀರು ಕೆಳಕ್ಕೆ ರಭಸದಿಂದ ಬೀಳುತ್ತಿದ್ದು, ಇದರಿಂದ ಕೆಳಗೆ ಹೆದ್ದಾರಿಯಲ್ಲಿ ಸಂಚರಿಸುವ ದ್ವಿಚಕ್ರ ವಾಹನ ಸವಾರರು ಹಾಗೂ ಪಾದಚಾರಿಗಳು ತೀವ್ರ ಸಂಕಷ್ಟ ಹಾಗೂ ಅಪಾಯಕರ ಸನ್ನಿವೇಶ ಎದುರಿಸುವಂತಾಗಿದೆ.    
short by: NP / read more at VPnews