Skip to main content


"ಅಭಯಹಸ್ತ" ಚಿತ್ರದ ವಿಭಿನ್ನ ಪೋಸ್ಟರ್ ಬಿಡುಗಡೆ

ಅಭಯಹಸ್ತ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ರಾಜೇಂದ್ರಸೂರಿ ಪ್ರೊಡಕ್ಷನ್ ಲಾಂಛನದಲ್ಲಿ ಡಾ||ಪಿ.ಸತೀಶ್ಕುಮಾರ್ ಮೆಹ್ತಾ ಹಾಗೂ ನವೀನ್ ಪಿ.ಬಿ ನಿರ್ಮಿಸಿರುವ 'ಅಭಯಹಸ್ತ' ಚಿತ್ರದ ಪ್ರಥಮ ಪ್ರತಿ ಸಿದ್ಧವಾಗಿದ್ದು, ಚಿತ್ರ ಸದ್ಯದಲ್ಲೇ ಬಿಡುಗಡೆಯಾಗಲಿದೆ. ವೀನ್ ಪಿ.ಬಿ ನಿರ್ದೇಶನದ ಈ ಚಿತ್ರದ ವಿಭಿನ್ನ ಪೋಸ್ಟರ್ ಬಿಡುಗಡೆಯಾಗಿದೆ.

ಇತ್ತೀಚೆಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. `ಇದೊಂದು ಸೆಲ್ಫಿ ಪೋಸ್ಟರ್ ಎಂದು ತಿಳಿಸಿರುವ ನಿರ್ದೇಶಕ ನವೀನ್. ಹಾಗೇ ನೋಡಿದರೆ ಈ ಪೋಸ್ಟರ್ ಬಗ್ಗೆ ಏನೂ ತಿಳಿಯುವುದಿಲ್ಲ. ಪೋಸ್ಟರ್ನೊಂದಿಗೆ ಸೆಲ್ಫಿ ತೆಗೆದುಕೊಂಡರೆ ಅಥವಾ ಕನ್ನಡಿಯ ಮುಂದೆ ಹಿಡಿದರೆ ಪೋಸ್ಟರ್ ಸರಿಯಾಗಿ ಕಾಣುತ್ತದೆ ಎನ್ನುತ್ತಾರೆ. ' ಕನ್ನಡ ಚಿತ್ರರಂಗದಲ್ಲಿ ಇದು ಮೊದಲ ಪ್ರಯತ್ನ ಎನ್ನುವ ಅಭಿಪ್ರಾಯ ನಿರ್ದೇಶಕರದು. ಈ ಪೋಸ್ಟರ್ ಬಗ್ಗೆ ಚಿತ್ರರಂಗದ ಗಣ್ಯರಿಂದ ಮೆಚ್ಚುಗೆ ವ್ಯಕ್ತವಾಗಿದೆ.  

short by Pawan / read more at Balkani News

Comments