Skip to main content


ಗೋಲ್ಡನ್ ಸ್ಟಾರ್ ಗಣೇಶ್ ಇನ್ನೊಂದು ಸಿನಿಮಾ ದಾಖಲೆ

ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ರಶ್ಮಿಕಾ ಅಭಿನಯದ ಚಮಕ್ ಯಶಸ್ವಿಯಾಗಿ 90 ನೇ ಪೂರೈಸಿ 100 ನೇ ದಿನಗಳತ್ತ ಗೋಲ್ಡನ್ ಪಯಣ ಮಾಡಿದೆ . ಇದು ಸಿಂಪಲ್ ಸುನಿ ನಿರ್ದೇಶನದ ಸಿನಿಮಾ . ಈ ಚಿತ್ರಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು . ವಿಮರ್ಶಕರಿಂದಲೂ ಒಳ್ಳೆಯ ಮಾತುಗಳು ಕೇಳಿಬಂದಿದ್ದವು . 

ಮೊದಲ ಬಾರಿಗೆ ಗಣೇಶ್ ‌ ಮತ್ತು ರಶ್ಮಿಕಾ ಮಂದಣ್ಣ ತೆರೆ ಹಂಚಿಕೊಂಡಿರುವ ಸಿನಿಮಾ ಇದು . ಇಬ್ಬರೂ ಮೊದಲ ಬಾರಿಗೆ ಹೊಸ ರೀತಿಯ ಪಾತ್ರ ಮಾಡಿದ್ದಾರೆ . ಈ ಜೋಡಿಗೆ ಹೇಳಿ ಮಾಡಿಸಿದ ಕಥೆ ಬರೆದಿದ್ದಾರಂತೆ ನಿರ್ದೇಶಕರು .

ಕ್ರಿಸ್ಟಲ್ ‌ ಪಾರ್ಕ ಸಿನಿಮಾಸ್ ‌ ಬ್ಯಾನರ್ ‌ ನಲ್ಲಿ ನಿರ್ಮಾಣವಾಗಿದ್ದ ಚಮಕ್ ಇನ್ನೂರಕ್ಕೂ ಹೆಚ್ಚು ಚಿತ್ರಮಂದಿರಗಳ ಲ್ಲಿ ರಿಲೀಸ್ ‌ ಆಗಿ ದಾಖಲೆ ನಿರ್ಮಿಸಿತ್ತು . ಈ ಮಧ್ಯೆ ಚಮಕ್ , ಕಸ್ತೂರಿ ಮೀಡಿಯಾ ಸಾಗರೋತ್ತರ ಪ್ರದರ್ಶನದ ಹಕ್ಕು ಪಡೆದುಕೊಂಡಿದ್ದು ಅಮೆರಿಕಾ ಮತ್ತು ಕೆನಡಾಗಳಲ್ಲಿ 32 ಕೇಂದ್ರಗಳಲ್ಲಿ ಚಿತ್ರ ಬಿಡುಗಡೆಯಾಗಿದೆ .  

short by Pawan / read more at Balkani News

Comments