Skip to main content


ದೊಡ್ಡಪ್ಪನ ಜೊತೆ ಸ್ಕ್ರೀನ್ ಶೇರ್ ಮಾಡಲಿದ್ದಾರೆ ದೊಡ್ಮನೆ ಕುಡಿ ವಿನಯ್ ರಾಜ್ ಕುಮಾರ್

ಈಗಾಗಲೇ ಸಿದ್ದಾರ್ಥ, ರನ್ ಆಯಂಟನಿ, ಸಿನಿಮಾದ ಮೂಲಕ ಗಮನ ಸೆಳೆದು ಅನಂತು ವರ್ಸಸ್' ನುಸ್ರತ್ ಚಿತ್ರದಲ್ಲಿ ಬ್ಯುಸಿಯಾಗಿರುವ ನಟ ವಿನಯ್ ರಾಜ್ ಕುಮಾರ್ ನಿರ್ಮಾಪಕ ಎನ್ ಎಸ್ ರಾಜ್ ಕುಮಾರ್ ಗೆ ಕಾಲ್ ಶೀಟ್ ನೀಡಿದ್ದಾರೆ.           

ಈ ನಡುವೆ ಅಪ್ಪ ಅಮ್ಮ ಪ್ರೀತಿ ಎಂಬ ಸಿನಿಮಾದಲ್ಲಿ ಕೂಡ ನಟಿಸುತ್ತಿರುವ ವಿನಯ್ ರಾಜ್ ಕುಮಾರ್ ಎನ್ ಎಸ್ ರಾಜ್ ಕುಮಾರ್ ಸಿನಿಮಾದಲ್ಲಿ ನಟಿಸಲಿದ್ದಾರೆ ಇದೊಂದು ಪಕ್ಕಾ ಆಯಕ್ಷನ್ ಸಿನಿಮವಾಗಿದ್ದು, ವಿಶೇಷ ಏನಪ್ಪ ಅಂದ್ರೆ ಈ ಸಿನಿಮಾದಲ್ಲಿ ವಿನಯ್ ದೊಡ್ಡಪ್ಪ ಶಿವರಾಜ್ ಕುಮಾರ್ ಜೊತೆ ಕೂಡ ತೆರೆ ಹಂಚಿಕೊಳ್ಳಲಿದ್ದಾರೆ.   

ಆಗಸ್ಟ್ ನಲ್ಲಿ ಚಿತ್ರದ ಮಹೂರ್ತ ನೆರವೇರಲಿದ್ದು, ಅನಂತು ವರ್ಸಸ್' ನುಸ್ರತ್, ಅಪ್ಪ ಅಮ್ಮ ಪ್ರೀತಿ ಸಿನಿಮಾದ ನಂತರ ಈ ಸಿನಿಮಾವನ್ನು ವಿನಯ ರಾಜ್ ಕುಮಾರ್ ಕೈಗೆತ್ತಿಕೊಳ್ಳಲಿದ್ದಾರೆ.     

short by Pawan / read more at Kannada News Now

Comments