Skip to main content


ಮಗಳನ್ನ ಮದ್ವೆಯಾಗಿದ್ದಕ್ಕೆ ಅಳಿಯನ ಮನೆಗೆ ರೌಡಿಗಳನ್ನು ಕಳುಹಿಸಿದ ಮಾವ

ಮನೆಯವರ ವಿರೋಧ ನಡುವೆಯೂ ಪ್ರೀತಿಸಿದ ಯುವಕನನ್ನು ವರಿಸಿದ ಯುವತಿಗೆ ಹೆತ್ತವರಿಂದ ಕೊಲೆ ಬೆದರಿಕೆ ಬಂದಿದೆ. ಹೀಗಾಗಿ ನವ ದಂಪತಿ ಈಗ ರಕ್ಷಣೆಗಾಗಿ ಪೊಲೀಸ್ ಆಯುಕ್ತರ ಮೊರೆ ಹೋಗಿದ್ದಾರೆ.

ಬೆಂಗಳೂರಿನ ದೊಡ್ಡಕಲ್ಲಸಂಧ್ರ ನಿವಾಸಿ ವೀಣಾ ಹಾಗೂ ಮೈಸೂರು ದಟ್ಟಗಳ್ಳಿ ನಿವಾಸಿ ನಿತಿನ್ ಕುಮಾರ್ ಕಳೆದ 6 ತಿಂಗಳಿನಿಂದ ಪ್ರೀತಿಸುತ್ತಿದ್ದರು. ಜಾತಿ ಬೇರೆ ಎನ್ನುವ ಕಾರಣಕ್ಕೆ ವೀಣಾ ಮನೆಯಲ್ಲಿ ಇವರ ಪ್ರೀತಿಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಪೋಷಕರ ವಿರೋಧವನ್ನು ಲೆಕ್ಕಿಸದೇ ವೀಣಾ ನಾಲ್ಕು ದಿನಗಳ ಹಿಂದೆ ಶ್ರೀ ರಂಗಪಟ್ಟಣದ ನಿಮಿಷಾಂಬ ದೇವಸ್ಥಾನದಲ್ಲಿ ನಿತಿನ್ ಕೈ ಹಿಡಿದು ರಿಜಿಸ್ಟರ್ ಕಚೇರಿಯಲ್ಲಿ ಮದುವೆ ನೊಂದಣಿ ಮಾಡಿಸಿದ್ದಾರೆ.      

short by NP / read more at Public TV

Comments