Skip to main content


ಬಾಂಗ್ಲಾದೇಶ ಫೈನಲ್‌ಗೆ; ಲಂಕಾಗೆ ನಿರಾಸೆ

ಆರಂಭಿಕ ಬ್ಯಾಟ್ಸ್‌ಮನ್‌ ತಮೀಮ್ ಇಕ್ಬಾಲ್ ಮತ್ತು ಆರನೇ ಕ್ರಮಾಂಕದ ಮಹಮ್ಮದುಲ್ಲಾ ಇಲ್ಲಿನ ಪ್ರೇಮದಾಸ ಕ್ರೀಡಾಂಗಣದಲ್ಲಿ ಮಿಂಚು ಹರಿಸಿದರು. ಅವರ ಪರಿಣಾಮಕಾರಿ ಬ್ಯಾಟಿಂಗ್ ನೆರವಿನಿಂದ ಬಾಂಗ್ಲಾದೇಶ ತಂಡ ನಿದಾಸ್ ಕಪ್‌ ತ್ರಿಕೋನ ಟ್ವೆಂಟಿ–20 ಸರಣಿಯ ಫೈನಲ್‌ಗೆ ಪ್ರವೇಶಿಸಿತು. 160 ರನ್‌ಗಳ ಗುರಿ ಬೆನ್ನತ್ತಿದ ಪ್ರವಾಸಿ ತಂಡಕ್ಕೆ ತಮೀಮ್‌ (50; 42 ಎ, 2 ಸಿ, 4 ಬೌಂ) ಉತ್ತಮ ಬುನಾದಿ ಹಾಕಿಕೊಟ್ಟರು. 18 ಎಸೆತಗಳಲ್ಲಿ 43 ರನ್‌ ಗಳಿಸಿದ ಮಹಮ್ಮದುಲ್ಲಾ ಪಂದ್ಯದ ಗತಿಯನ್ನೇ ಬದಲಿಸಿದರು. ಎರಡು ಸಿಕ್ಸರ್ ಮತ್ತು ಮೂರು ಬೌಂಡರಿ ಗಳಿಸಿ ಅಜೇಯರಾಗಿ ಉಳಿದ ಅವರು ಒಂದು ಎಸೆತ ಬಾಕಿ ಇರುವಾಗ ತಂಡಕ್ಕೆ ಜಯ ತಂದುಕೊಟ್ಟರು. ಟಾಸ್‌ ಗೆದ್ದ ಬಾಂಗ್ಲಾದೇಶ ಫೀಲ್ಡಿಂಗ್  ಆಯ್ಕೆ ಮಾಡಿಕೊಂಡಿತು. ಬಾಂಗ್ಲಾದ ಶಿಸ್ತಿನ ಬೌಲಿಂಗ್‌ ದಾಳಿಗೆ ನಲುಗಿದ ಲಂಕಾ ನಿರಂತರವಾಗಿ ವಿಕೆಟ್ ಕಳೆದುಕೊಂಡಿತು. ಆದರೆ ಕುಶಾಲ್‌ ಪೆರೇರ (61; 40 ಎ, 1 ಸಿಕ್ಸರ್‌, 7 ಬೌಂ) ಮತ್ತು ತಿಸಾರ ಪೆರೇರ (58; 37 ಎ, 3 ಸಿ, 3 ಬೌಂ) ಎದುರಾಳಿಗಳ ದಾಳಿಯನ್ನು ಮೆಟ್ಟಿನಿಂತು ಸ್ಪರ್ಧಾತ್ಮಕ ಮೊತ್ತ ಗಳಿಸಲು ನೆರವಾದರು.     
ಸಂಕ್ಷಿ‌ಪ್ತ ಸ್ಕೋರ್‌: 
ಶ್ರೀಲಂಕಾ: 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 159
ಬಾಂಗ್ಲಾದೇಶ: 19.5 ಓವರ್‌ಗಳಲ್ಲಿ 8 ವಿಕೆಟ್‌ಗೆ 160.         
Short by: Prajwal / read more at Prajavani