Skip to main content


ಭಾರತ ವನಿತೆಯರಿಗೆ ಮತ್ತೆ ಸೋಲು

ತ್ರಿಕೋನ ವನಿತಾ ಟಿ20 ಸರಣಿಯಲ್ಲಿ ಸತತ ಮೂರನೇ ಪಂದ್ಯದಲ್ಲಿ ಸೋತಿರುವ ಭಾರತ ವನಿತೆಯರು ಫೈನಲಿಗೇರುವ ಅವಕಾಶದಿಂದ ವಂಚಿತರಾಗಿದ್ದಾರೆ. ಸೋಮವಾರ ನಡೆದ ದ್ವಿತೀಯ ಸುತ್ತಿನ ಪಂದ್ಯದಲ್ಲಿ ಭಾರತವು ಆಸ್ಟ್ರೇಲಿಯಕ್ಕೆ 36 ರನ್ನುಗಳಿಂದ ಶರಣಾಗಿದೆ.  
   ಮೊದಲು ಬ್ಯಾಟಿಂಗ್‌ ಮಾಡಿದ ಆಸ್ಟ್ರೇಲಿಯ ವನಿತೆಯರು ಬೆತ್‌ ಮೂನಿ ಮತ್ತು ಎಲಿಸ್‌ ವಿಲಾನಿ ಅವರ ಅರ್ಧಶತಕದಿಂದಾಗಿ 5 ವಿಕೆಟಿಗೆ 186 ರನ್‌ ಪೇರಿಸಿತು. ಮೂನಿ 71 ರನ್‌ ಗಳಿಸಿದ್ದರೆ ವಿಲಾನಿ 10 ಬೌಂಡರಿ ನೆರವಿನಿಂದ 61 ರನ್‌ ಹೊಡೆದರು.
   ಗೆಲ್ಲಲು ಕಠಿನ ಗುರಿ ಪಡೆದ ಭಾರತ ವನಿತೆಯರು ಆರಂಭದಲ್ಲಿಯೇ ಎಡವಿದರು. 26 ರನ್‌ ಗಳಿಸುವಷ್ಟರಲ್ಲಿ ತಂಡ ಮೂರು ವಿಕೆಟ್‌ ಕಳೆದುಕೊಂಡು ಒದ್ದಾಡುತ್ತಿತ್ತು. ಆದರೆ ಜೆಮಿಮಾ ರಾಡ್ರಿಗಸ್‌ ಸಹಿತ ಹರ್ಮನ್‌ಪ್ರೀತ್‌ ಕೌರ್‌ ಮತ್ತು ಅನುಜಾ ಪಾಟೀಲ್‌ ಗೆಲ್ಲಲು ಕಠಿನ ಪ್ರಯತ್ನಪಟ್ಟರು. ಆದರೆ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟಿಗೆ 150 ರನ್‌ ಗಳಿಸಲಷ್ಟೇ ಶಕ್ತವಾಗಿ ಶರಣಾದರು.            

Short by: Prajwal / read more at Udayavani

Comments