Skip to main content


ಪ್ರಭುದೇವ ಅಭಿನಯದ ತಮಿಳಿನ 'ಮರ್ಕ್ಯೂರಿ' ಮೂಖಿ ಚಿತ್ರ ಕನ್ನಡದಲ್ಲೂ ಪ್ರದರ್ಶನ

1987ರಲ್ಲಿ ತೆರೆ ಕಂಡಿದ್ದ ಮೂಖಿ ಚಿತ್ರ ಪುಷ್ಪಕ ವಿಮಾನ ಸಖತ್ ಸದ್ದು ಮಾಡಿತ್ತು ಅಲ್ಲದೆ ಭಾಷಾಯ ಗಡಿ ದಾಟಿ ಭಾರತದ ಎಲ್ಲಾ ಭಾಷೆಗಳಲ್ಲೂ ಬಿಡುಗಡೆಯಾಗಿತ್ತು. ಇದೀಗ ಅದೇ ರೀತಿಯ ಚಿತ್ರವೊಂದನ್ನು ಕಾರ್ತಿಕ್ ಸುಬ್ಬರಾಜ್ ಮಾಡಿದ್ದು ಈ ಚಿತ್ರ ಕನ್ನಡದಲ್ಲೂ ಪ್ರದರ್ಶನ ಕಾಣಲಿದೆ. 
ಪಿಜ್ಜಾ ಹಾರರ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದ ಕಾರ್ತಿಕ್ ಸುಬ್ಬರಾಜ್ ಇದೀಗ ಮರ್ಕ್ಯೂರಿ ಟೈಟಲ್ ನ ಹೊಸ ಚಿತ್ರ ಮಾಡಿ ಮುಗಿಸಿದ್ದಾರೆ. ಇದೊಂದು ಮೂಖಿ ಚಿತ್ರವಾಗಿದ್ದರಿಂದ ಏಪ್ರಿಲ್ 13ರಂದು ಕನ್ನಡದಲ್ಲೂ ಪ್ರದರ್ಶನ ಕಾಣುತ್ತಿದೆ. ಚಿತ್ರದಲ್ಲಿ ಪ್ರಭುದೇವ ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಸನತ್ ರೆಡ್ಡಿ, ದೀಪಕ್ ಪರಮೇಶ್, ಇಂದುಜಾ ಮತ್ತು ರಮ್ಯಾ ನಂಬೀಸನ್ ಪಾತ್ರವರ್ಗದಲ್ಲಿದ್ದಾರೆ. 
Short by: Pawan / read more at Kannada Prabha