Skip to main content


ದೀಪಿಕಾ ಮದುವೆ ಡೇಟ್ ಫಿಕ್ಸ್ ಆಯ್ತು! ವಿವಾಹ ಎಲ್ಲಿ ಗೊತ್ತೆ?

ಬಾಲಿವುಡ್'ನಲ್ಲಿ ಸದ್ಯ ಹರಿದಾಡುತ್ತಿರುವ ಲವ್ ಸ್ಟೋರಿಗಳಲ್ಲಿ ಲೇಟೆಸ್ಟ್ ಆಗಿರುವುದು ರಣವೀರ್ ಸಿಂಗ್ ಹಾಗೂ ದೀಪಿಕಾ ಅವರದು.

ಈಗಿನ ತಾಜಾ ಸುದ್ದಿಯೆಂದರೆ  ಇವರಿಬ್ಬರು ಶೀಘ್ರದಲ್ಲಿಯೇ ಮದುವೆಯಾಗುತ್ತಿದ್ದಾರೆ. ಸೆಪ್ಟಂಬರ್ ಅಥವಾ ಡಿಸೆಂಬರ್'ನಲ್ಲಿ ಈ ಬಾಲಿವುಡ್ ಪ್ರೇಮಿಗಳು ದಾಂಪತ್ಯಕ್ಕೆ ಕಾಲಿಡಲಿದ್ದಾರೆ ಎನ್ನಲಾಗಿದೆ. ಆದರೆ ಮದುವೆ ಭಾರತದಲ್ಲಿಯೇ ಅಥವಾ ಹೊರ ರಾಷ್ಟ್ರದಲ್ಲಿಯೇ ಎಂಬುದು ಮಾತ್ರ ಗೋಪ್ಯವಾಗಿದೆ.

ದೀಪೀಕಾ ಈಗಾಗಲೇ ಮದುವೆ ತಯಾರಿಗೆ ರೆಡಿಯಾಗುತ್ತಿದ್ದಾರೆ. ಪ್ರತಿಷ್ಟಿತ ಆಭರಣ ಹಾಗೂ ವಸ್ತ್ರ ಮಳಿಗೆಗಳಲ್ಲಿ ಶಾಪಿಂಗ್ ಮಾಡುತ್ತಿದ್ದಾರೆ. ಕೆಲವು ದಿನಗಳ ಹಿಂದಷ್ಟೆ ಇಬ್ಬರು ಜೋಡಿಗಳು ರಜೆಯ ಮಜವನ್ನು ಮಾಲ್ಡೀವ್ಸ್ ದೇಶದಲ್ಲಿ ಕಳೆದಿದ್ದರು. ಕೆಲವು ದಿನಗಳಲ್ಲಿಯೇ ಇಬ್ಬರ ಮದುವೆಯ ಸುದ್ದಿ ಬಹಿರಂಗವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

short by Shraman Jain / read more at Suvarna News