Skip to main content


ಶಿವಣ್ಣನ ಕುರಿತು ಆರೋಪ ಮಾಡಿದ್ದ ಹುಚ್ಚ ವೆಂಕಟ್ ಗೆ ದರ್ಶನ್ ಹೇಳಿದ್ದಾದರು ಏನು..??

ಇತ್ತೀಚೆಗಷ್ಟೇ ಹುಚ್ಚ ವೆಂಕಟ್ ಶಿವಣ್ಣ ಮನೆಗೆ ಹೋದಾಗ ಅವರು ನನ್ನನ್ನು ನೋಡಲೇ ಇಲ್ಲ, ಒಂದು ಲೋಟ ನೀರೂ ಕೊಡಲಿಲ್ಲ ಎಂದು ಅವರ ಕುರಿತು ಅಸಮಾಧಾನ ವ್ಯಕ್ತ ಪಡಿಸಿದ್ದ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಆಯ್ತು, ನಂತರ ಶಿವಣ್ಣನ ಅಭಿಮಾನಿಗಳ ಒತ್ತಾಯದ ಮೇರೆಗೆ ಹುಚ್ಚ ವೆಂಕಟ್ ಶಿವಣ್ಣನಿಗೆ ಕ್ಷಮೆ ಕೇಳಿದ್ದು ಆಯ್ತು.

ಅಂದಹಾಗೆ, ಈ ಕುರಿತು ಸ್ಪಂದಿಸಿದ ಚ್ಯಾಲೆಂಜಿಂಗ್ ಸ್ಟಾರ್ ದರ್ಶನ್, "ಹೌದು, ಒಬ್ಬ ಸೆಲೆಬ್ರಿಟಿಯ ಮನೆಗೆ ಹೋಗುವ ಮೊದಲು ಅವರು ಅಲ್ಲಿ ಇದ್ದಾರೋ ಇಲ್ಲವೋ ಎಂದು ಪರೀಕ್ಷಿಸಿ ಹುಚ್ಚ ವೆಂಕಟ್ ಅವರು ಹೊರಡಬೇಕಿತ್ತು. ಅದನ್ನು ಬಿಟ್ಟು ದಿಢೀರನೇ ಹೋಗಿ ಶಿವಣ್ಣ ನನ್ನನ್ನು ನೋಡಲಿಲ್ಲ ಎಂದು ಆರೋಪಿಸುವುದು ತಪ್ಪು ಎಂದು ಹೇಳಿದ್ದಾರಂತೆ ನಟ ದರ್ಶನ್. ಶಿವಣ್ಣ ಅವರ ಮನೆಯಲ್ಲಿ ಯಾವ ರೀತಿ ಅತಿಥಿ ಸತ್ಕಾರ ಮಾಡುತ್ತಾರೆ ಎಂಬುದು ಎಲ್ಲರಿಗೂ ಗೊತ್ತು, ಈ ರೀತಿ ಹುಟ್ಟು ಆರೋಪಗಳನ್ನು ಮಾಡುವುದನ್ನು ನಿಲ್ಲಿಸಬೇಕು," ಎಂದಿದ್ದಾರೆ ದರ್ಶನ್!

By: Shraman Jain.

Comments