Skip to main content


ಡಿಸ್ಕೋ ರಾಜ ಆಗಿ ತೆರೆಯ ಮೇಲೆ ಮಿಂಚಲಿರುವ ಮಾಸ್ ಮಹಾರಾಜಾ!

ತೆಲುಗು ಸಿನಿ ಪರಿಶ್ರಮದಲ್ಲಿ ಸತತ ಸೋಲಿನಿಂದ ಕಂಗೆಟ್ಟು ಹೋಗಿದ್ದ ಟಾಲಿವುಡ್ ನ ಮಾಸ್ ಮಹಾರಾಜಾ ರವಿತೇಜ ಇತ್ತಿಚಿಗೆ 'ರಾಜಾ ದಿ ಗ್ರೇಟ್'ಹಾಗು'ಟಚ್‌ ಚೇಸಿ ಚೂಡು' ಅನ್ನೋ ಸಿನಿಮಾದ ಮೂಲಕ ಗ್ರ್ಯಾಂಡ್ ಎಂಟ್ರಿ ನೀಡಿದ್ದರು. ಈ ಸಿನಿಮಾಗಳು ಸಹ ಅಷ್ಟು ಸದ್ದು ಮಾಡದೇ ನೆಲಕಚ್ಚಿದ್ದರ ಪರಿಣಾಮವಾಗಿ ರವಿತೇಜ ಈಗ 'ಡಿಸ್ಕೋರಾಜಾ' ಆಗಿ ರಂಜಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸದ್ಯಕ್ಕೆ ರವಿ ತೇಜ ಎಸ್‌ಆರ್‌ಟಿ ಎಂಟರ್‌ಟೈನ್ಮೆಂಟ್ ಬ್ಯಾನರ್ ಅಡಿ ' ನೇಲ ಟಿಕ್ಕೆಟ್ಟು' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾವನ್ನು ರಾಮ್‌ ತಲ್ಲೂರಿ ನಿರ್ಮಿಸುತ್ತಿದ್ದು ಕಲ್ಯಾಣ್ ಕೃಷ್ಣ ಕುರಸಾಲ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ ಎನ್ನಲಾಗಿದೆ.

ಇತ್ತೀಚಿನ ವರದಿಗಳ ಪ್ರಕಾರ ರವಿತೇಜ ವಿಐ ಆನಂದ್ ನಿರ್ದೇಶನದ ಸಿನಿಮಾವೊಂದಕ್ಕೆ ಸಹಿ ಹಾಕಿದ್ದು ಚಿತ್ರದ ಹೆಸರು ' ಡಿಸ್ಕೋ ರಾಜ' ಎಂದು ತಿಳಿದು ಬಂದಿದೆ. ಈ ಸಿನಿಮಾವನ್ನು ಕೂಡಾ 'ನೇಲ ಟಿಕ್ಕೆಟ್ಟು' ನಿರ್ಮಾಪಕ ರಾಮ್‌ ತಲ್ಲೂರಿ ನಿರ್ಮಿಸುತ್ತಿದ್ದಾರೆ ಹೇಳಲಾಗಿದೆ.  

short by Pawan / read more at Balkani News

Comments