Skip to main content


ಅಪ್ಪು ಹೊಸ ಸಿನಿಮಾ ಸುದ್ದಿ : ಮತ್ತೆ ಒಂದಾಯಿತು 'ಅಂಜನೀಪುತ್ರ' ಜೋಡಿ.

ಅಂಜನೀಪುತ್ರ' ಸಿನಿಮಾದ ಜೋಡಿ ಮತ್ತೆ ಒಂದಾಗಲಿದೆ ಎಂದಾಗ ಚಿತ್ರದ ನಿರ್ದೇಶಕ ಹರ್ಷ - ಪುನೀತ್ ರಾಜ್ ಕುಮಾರ್ ಅಥವಾ ಪುನೀತ್ - ರಶ್ಮಿಕಾ ಮಂದಣ್ಣ ಜೋಡಿ ಮತ್ತೆ ಒಟ್ಟಿಗೆ ಸಿನಿಮಾ ಮಾಡುತ್ತಿದ್ದಾರ ಎನ್ನುವ ಪ್ರಶ್ನೆ ಮೂಡುತ್ತದೆ. ಆದರೆ ಈಗ ಪುನೀತ್ ಮತ್ತೆ ಸಿನಿಮಾ ಮಾಡುತ್ತಿರುವುದು 'ಅಂಜನೀಪುತ್ರ' ನಿರ್ಮಾಪಕರ ಜೊತೆಗೆ.
ಅಂಜನೀಪುತ್ರ' ಸಿನಿಮಾಗೆ ಬಂಡವಾಳ ಹಾಕಿದ್ದ ನಿರ್ಮಾಪಕ ಎಂ ಎನ್ ಕುಮಾರ್ ಮತ್ತೆ ಪುನೀತ್ ರಾಜ್ ಕುಮಾರ್ ಅವರ ಹೊಸ ಸಿನಿಮಾವನ್ನು ನಿರ್ಮಾಣ ಮಾಡಲಿದ್ದಾರೆ. ಪುನೀತ್ ಈ ಪ್ರಾಜೆಕ್ಟ್ ಮಾಡುವುದು ಪಕ್ಕಾ ಎಂದು ನಿರ್ಮಾಪಕ ಎಂ ಎನ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಅವರ ಎಂ ಎನ್ ಕೆ ಬ್ಯಾನರ್ ನಲ್ಲಿ ಚಿತ್ರ ಮೂಡಿ ಬರಲಿದೆ. ನಿರ್ಮಾಪಕ ಎಂ ಎನ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಜೋಡಿಯ ಈ ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿ ಹೊರ ಬಂದಿಲ್ಲ. ಸಿನಿಮಾದ ಟೈಟಲ್, ನಿರ್ದೇಶಕ, ಕಲಾವಿದರ ಮತ್ತು ತಂತ್ರಜ್ಞರ ತಂಡ ಇನ್ನೂ ಫೈನಲ್ ಆಗಿಲ್ಲ. ಸೋ, ಪುನೀತ್ ಗೆ ಮತ್ತೆ ಯಾವ ನಿರ್ದೇಶಕರು ಆಕ್ಷನ್ ಕಟ್ ಹೇಳುತ್ತಾರೆ ಎನ್ನುವ ನಿರೀಕ್ಷೆ ಮತ್ತೊಂದು ಕಡೆ ಇದೆ.
Short by: Pawan / read more at Filmibeat