Skip to main content


ರಾಹುಲ್ ಗಾಂಧಿ ಪ್ರಧಾನಿ ವಿರುದ್ಧ ವ್ಯಂಗ್ಯವಾಡಿದ್ದಾರೆ

ಮೋದಿ ಸರ್ಕಾರದ ವಿರುದ್ಧ ಬಿಜೆಪಿಯೇತರ ಪಕ್ಷಗಳು ಒಗ್ಗೂಡುತ್ತಿರುವ ಬೆನ್ನಲ್ಲೇ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ವಿರುದ್ಧ ವ್ಯಂಗ್ಯವಾಡಿದ್ದಾರೆ. ಮೋದಿ ಅವರೇ ನಿಮ್ಮ ದೊಡ್ಡ ದೊಡ್ಡ ಬಣ್ಣದ ಮಾತುಗಳಿಗೆ ಒಂದು ಸಣ್ಣ ತಿದ್ದುಪಡಿ ಬೇಕಿದೆ, ನೀವು ಹೇಳುತ್ತಿರುವ ಇಂಡಿಯಾ ಇಸ್ ರೈಸಿಂಗ್ ಸತ್ಯವಾಗಿದೆ. ಆದರೆ ಭಾರತ ನಿಮ್ಮ ವಿರುದ್ಧ ರೈಸಿಂಗ್‌ ಆಗುತ್ತಿದೆ ಎಂದು ಟ್ವೀಟ್ ಮೂಲಕ ಟಾಂಗ್ ಕೊಟ್ಟಿದ್ದಾರೆ. ಮೋದಿ ಅವರ ಮಹತ್ವಾಕಾಂಕ್ಷೆಯ 'ರೈಸಿಂಗ್‌ ಇಂಡಿಯಾ' ವಿಚಾರವನ್ನು ಬಳಸಿಕೊಂಡು ಮೋದಿ ಅವರ ಕಾಲೆಳೆದಿದ್ದಾರೆ.      
short by: NP / read more at Kannada.eenaduindia.com