Skip to main content


ಸಲ್ಮಾನ್ ಗೆ ಜೋಡಿಯಾಗಲಿದ್ದಾರಾ ಪ್ರಿಯಾಂಕ, ಶ್ರದ್ಧಾ?

ಸಲ್ಮಾನ್ ಖಾನ್ ಅಭಿನಯದ ಭರತ್ ಚಿತ್ರದಲ್ಲಿ ಯಾರೂ ಹಿರೋಯಿನ್ ಆಗಲಿದ್ದಾರೆ ಎಂಬ ಕುರಿತಂತೆ ಚರ್ಚೆಗಳು ಸಾಗುತ್ತಿದೆ . ನಟಿ ಶ್ರದ್ಧಾ ಕಪೂರ್ ಹೆಸರು ಕೇಳುತ್ತಿರುವಂತೆಯೇ , ಇದೀಗ ಪ್ರಿಯಾಂಕ ಚೋಪ್ರಾ ಹೆಸರು ಚಿತ್ರದೊಂದಿಗೆ ಕೇಳಿಬರುತ್ತಿದೆ . ಹಾಲಿವುಡ್ ನಲ್ಲಿ ಬ್ಯುಸಿಯಾಗಿದ್ದ ಪ್ರಿಯಾಂಕ ಚೋಪ್ರಾ , ಇದೀಗ ಭಾರತಕ್ಕೆ ವಾಪಾಸ್ಸಾಗಿದ್ದು , ನಾನು ಬಾಲಿವುಡ್ ಚಿತ್ರವನ್ನು ಅಂತಿಮಗೊಳಿಸುತ್ತಿದ್ದೇನೆ ಎಂದು ಹೇಳಿಕೆ ನೀಡಿದ್ದರು.

ಹೀಗಾಗಿ ಪಿಗ್ಗಿ , ಭರತ್ ಚಿತ್ರದಲ್ಲಿ ನಟಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು . ಇದರ ಬೆನ್ನೆಲ್ಲೆ ಶ್ರದ್ಧಾ ಕಪೂರ್ ಹೆಸರು ಕೂಡ ಭರತ್ ಚಿತ್ರದೊಂದಿಗೆ ಥಳಕು ಹಾಕಿಕೊಂಡಿತ್ತು . ಅಷ್ಟೇ ಅಲ್ಲದೆ ಸಲ್ಮಾನ್ ಖಾನ್ ಹಾಗೂ ಶ್ರದ್ಧಾ ಕಾಪೂರ್ ಜೋಡಿ ಇದೇ ಮೊದಲ ಬಾರಿಗೆ ತೆರೆ ಮೇಲೆ ಕಾಣಿಸಿಕೊಳ್ಳಲಿದೆ .

ಶ್ರದ್ಧಾ ಕಪೂರ್ ತಂದೆ ಸಲ್ಮಾನ್ ಮತ್ತು ಶಕ್ತಿ ಇಬ್ಬರು 16 ಚಿತ್ರಗಳಲ್ಲಿ ಜೊತೆಯಾಗಿ ಕೆಲಸ ಮಾಡಿದವರು . ಆದರೆ 2011 ರ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಶಕ್ತಿ ಹಾಗೂ ಸಲ್ಮಾನ್ ಖಾನ್ ನಡುವೆ ಚಿಕ್ಕ ವಿಚಾರಕ್ಕೆ ಮನಸ್ತಾಪವಾಗಿತ್ತು . ಹೀಗಾಗಿ ಭರತ್ ಚಿತ್ರದಲ್ಲಿ ಶ್ರದ್ಧಾ ಕಪೂರ್ ನಟಿಸುತ್ತಾರಾ ಇಲ್ಲವೋ ಎಂಬುದು ಇನ್ನೂ ಖಚಿತವಾಗಿಲ್ಲ . ಪಿಗ್ಗಿ ಹೆಸರು ಕೂಡ ಇನ್ನೂ ಅಂತಿಮಗೊಂಡಿಲ್ಲ .  

short by Pawan / read more at Balkani News


Comments