Skip to main content


ಆಫರ್‌ ಬೇಕಂದ್ರೆ ಕಾಂಪ್ರಮೈಸ್‌ ಆಗಲೇಬೇಕು... ನಟಿಯ ಶಾಕಿಂಗ್‌ ಕಮೆಂಟ್‌‌‌‌‌‌‌‌‌‌‌

ಕೆಲವು ತೆಲುಗು ಚಿತ್ರಗಳಲ್ಲಿ ನಟಿಸಿರುವ ನಟಿ ಶ್ರೀ ರೆಡ್ಡಿ ಟಾಲಿವುಡ್ ಚಿತ್ರರಂಗದ ವಿರುದ್ಧ ಹರಿಹಾಯ್ದಿದ್ದಾರೆ. ಟಾಲಿವುಡ್‌ ಚಿತ್ರಗಳಿಗೆ ಪರಭಾಷೆಯ ನಟಿಯರನ್ನು ಕರೆತರುವ ನಿರ್ದೇಶಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಪತ್ರಿಕೆಯೊಂದಕ್ಕೆ ಮಾತನಾಡಿರುವ ನಟಿ ರೆಡ್ಡಿ, ಟಾಲಿವುಡ್‌ನಲ್ಲಿ ಕಾಸ್ಟಿಂಗ್ ಕೌಚ್ ಇದೆ ಎಂದು ಆರೋಪ ಮಾಡಿದ್ದಾರೆ. ಅವಕಾಶಗಳು ಸಿಗಬೇಕಾದ್ರೆ ಅವರ ಜತೆ ಕಾಂಪ್ರಮೈಸ್ ಆಗಬೇಕು. ಅಷ್ಟಾದ್ರೂ ಕೂಡ ಸಿಗುವುದು ಕೇವಲ ತಂಗಿಯ ಪಾತ್ರ ಅಥವಾ ಸೈಡ್ ರೋಲ್ ಮಾತ್ರ. 'ಕೆಲವು ಸ್ಟಾರ್ ನಟರು ಇಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ದೊಡ್ಡ ಕುಟುಂಬಗಳು ಟಾಲಿವುಡ್‌ಅನ್ನು ನಿಯಂತ್ರಿಸುವುದು ದುರದೃಷ್ಟಕರ ಎಂದಿರುವ ರೆಡ್ಡಿ, ನಾನು ಅವರ ಹೆಸರುಗಳನ್ನು ಬಹಿರಂಗಪಡಿಸುವುದಿಲ್ಲ ಎಂದಿದ್ದಾರೆ.

short by: SP / read more at EenaduIndia