Skip to main content


ಕ್ವಾರ್ಟರ್​ಫೈನಲ್​ಗೇರಿದ ಪಿವಿ ಸಿಂಧು

ಎದುರಾಳಿಯಿಂದ ಪ್ರಬಲ ಪೈಪೋಟಿ ಎದುರಿಸಿದರೂ ಅಂತಿಮ ಹಂತದಲ್ಲಿ ತಿರುಗೇಟು ನೀಡಿದ ಭಾರತದ ಸ್ಟಾರ್ ಷಟ್ಲರ್ ಪಿವಿ ಸಿಂಧು ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್​ಷಿಪ್​ನಲ್ಲಿ ಕ್ವಾರ್ಟರ್​ಫೈನಲ್​ಗೇರಿದ್ದಾರೆ. ಗುರುವಾರ ನಡೆದ ಪ್ರಿಕ್ವಾರ್ಟರ್​ಫೈನಲ್ ಪಂದ್ಯದಲ್ಲಿ ರಿಯೋ ಒಲಿಂಪಿಕ್ಸ್ ಹಾಗೂ ವಿಶ್ವ ಚಾಂಪಿಯನ್ ಬೆಳ್ಳಿ ಪದಕ ವಿಜೇತೆ ಪಿವಿ ಸಿಂಧು 21-13, 13-21, 21-18 ಗೇಮ್ಳಿಂದ ಥಾಯ್ಲೆಂಡ್​ನ ನಿಟ್​ಚೊನ್ ಜಿಂದಾಪೊಲ್ ವಿರುದ್ಧ ಸುಮಾರು 67 ನಿಮಿಷಗಳ ಕಾದಾಟದಲ್ಲಿ ರೋಚಕ ಜಯ ದಾಖಲಿಸಿದರು. ಇದರಿಂದ ಚಾಂಪಿಯನ್​ಷಿಪ್​ನಲ್ಲಿ ಸತತ 2ನೇ ಬಾರಿಗೆ ಎಂಟರಘಟ್ಟಕ್ಕೇರಿದ ಸಾಧನೆ ಮಾಡಿರುವ ಸಿಂಧು,ಭಾರತ ಮಹಿಳಾ ಸಿಂಗಲ್ಸ್ ವಿಭಾಗದ ಏಕೈಕ ಆಶಾಕಿರಣವಾಗಿದ್ದಾರೆ. ಮೊದಲ ಗೇಮ್ಲ್ಲಿ ಎದುರಾಳಿ ಆಟಗಾರ್ತಿಗೆ ಯಾವುದೇ ಅವಕಾಶ ನೀಡದೆ ಸುಲಭವಾಗಿ ಗೆದ್ದ ಸಿಂಧು, 2ನೇ ಗೇಮ್ಲ್ಲಿ ನೀರಸ ಪ್ರದರ್ಶನದಿಂದಾಗಿ ಸೋಲನುಭವಿಸಿದರು. ಈ ಮೂಲಕ ನಿರ್ಣಾಯಕ 3ನೇ ಗೇಮ್ ತೀವ್ರ ಜಿದ್ದಾಜಿದ್ದಿಗೆ ವೇದಿಕೆಯಾಯಿತು.     

Short by: Prajwal / read more at Vijayavani