Skip to main content


ಪಂಕಜ್ ಅಡ್ವಾಣಿ ಶುಭಾರಂಭ

ಭಾರತದ ಪಂಕಜ್ ಅಡ್ವಾಣಿ ಸೋಮವಾರ ಇಲ್ಲಿ ಆರಂಭವಾದ 17ನೇ ಏಷ್ಯನ್ ಬಿಲಿಯರ್ಡ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಶುಭಾರಂಭ ಮಾಡಿದ್ದಾರೆ. ಪುರುಷರ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಪಂಕಜ್‌ 4–0ರಲ್ಲಿ ಸಿಂಗಪುರದ ಯೊಟೆಕ್‌ ಶಿನ್ ಅವರನ್ನು ಮಣಿಸಿದರು. ವೃತ್ತಿಜೀವನದಲ್ಲಿ ಪಂಕಜ್ 19 ಬಾರಿ ವಿಶ್ವ ಚಾಂಪಿಯನ್ ಆಗಿದ್ದಾರೆ. ಇಲ್ಲಿ ಮೂರು ಗೇಮ್‌ಗಳಲ್ಲಿ ಸತತವಾಗಿ ಅವರು 100ಪಾಯಿಂಟ್ಸ್ ಕಲೆಹಾಕಿದರು. ಎದುರಾಳಿಗೆ ಒಂದೂ ಗೇಮ್‌ ಗೆಲ್ಲುವ ಅವಕಾಶ ನೀಡಲಿಲ್ಲ. ಭಾರತದ ಭರವಸೆಯ ಸ್ಪರ್ಧಿ ರೂಪೇಶ್‌ ಷಾ ಕೂಡ ಇಂಡೊನೇಷ್ಯಾದ ಮರ್ಲಾಂಡೊ ಶೀಹೊಬಿಂಗ್ ಎದುರು ಗೆದ್ದಿದ್ದಾರೆ.            

Short by: Prajwal / read more at Prajavani

Comments