Skip to main content


ಬ್ಯಾಂಕಿಂಗ್ ವ್ಯವಸ್ಥೆ ಸುಧಾರಿಸಲು ಆರ್‌ಬಿಐ ‘ನೀಲಕಂಠ’ನಂತೆ ವಿಷ ಕುಡಿಯಲೂ ಸಿದ್ಧ 

ಬ್ಯಾಂಕಿಂಗ್ ಕ್ಷೇತ್ರದಲ್ಲಿ ನಡೆದ ವಂಚನೆ, ಅಕ್ರಮಗಳನ್ನು ಗಮನಿಸಿದಾಗ ಆರ್‌ಬಿಐಗೆ ಬಹಳ ನೋವು ಹಾಗೂ ಕ್ರೋಧ ಉಂಟಾಗುತ್ತಿದೆ ಎಂದು ಪಟೇಲ್ ಹೇಳಿದರು. ಗುಜರಾತ್ ರಾಷ್ಟ್ರೀಯ ಕಾನೂನು ವಿವಿಯಲ್ಲಿ ಉಪನ್ಯಾಸ ನೀಡಿದ ಅವರು, ಕೆಲವು ಸಾಲಕೊಡುವವರ ನೆರವಿನಿಂದ ಉದ್ಯಮ ಸಮುದಾಯದ ಕೆಲವರು ನಮ್ಮ ದೇಶದ ಭವಿಷ್ಯವನ್ನು ಲೂಟಿ ಮಾಡುತ್ತಿದ್ದಾರೆ . ಈ ಅಪವಿತ್ರ ಹೊಂದಾಣಿಕೆಯನ್ನು ಮುರಿಯಲು ಆರ್‌ಬಿಐ ಗರಿಷ್ಟ ಪ್ರಯತ್ನ ನಡೆಸುತ್ತಿದೆ ಎಂದರು. ದೇಶದ ಸಾಲ ವ್ಯವಸ್ಥೆಯನ್ನು ಶುದ್ಧೀಕರಿಸಲು ಆರ್‌ಬಿಐ ಕ್ರಮ ಕೈಗೊಂಡಿದೆ .ಈ ಅಮೃತ ಮಥನ ಕಾರ್ಯದಲ್ಲಿ ರಾಕ್ಷಸರ ಪಕ್ಷ ವಹಿಸುವ ಬದಲು ದೇವತೆಗಳ ಪಕ್ಷ ವಹಿಸಿ ಎಂದು ಅವರು ಸೂಚ್ಯವಾಗಿ ಬ್ಯಾಂಕ್‌ಗಳಿಗೆ ಹಾಗೂ ಪ್ರವರ್ತಕರಿಗೆ ಕಿವಿಮಾತು ನುಡಿದರು.      
short by: NP / read more at Varthabharati.in