Skip to main content


ಕೊಹ್ಲಿಯಂತೆ ಧೋನಿ ಹೆಲ್ಮೆಟ್’ನಲ್ಲಿ ತ್ರಿವರ್ಣ ಧ್ವಜ ಯಾಕಿಲ್ಲ? ಕಾರಣ ತಿಳಿದರೆ ಧೋನಿಗೆ ಸೆಲ್ಯೂಟ್ ಮಾಡ್ತೀರ!

ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ಬಹುಚರ್ಚಿತ ಯಕ್ಷ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಸಾಮಾಜಿಕ ಜಾಲತಾಣದಲ್ಲಿ ವಿರಾಟ್ ಕೊಹ್ಲಿ ಅಭಿಮಾನಿಗಳು ಧೋನಿ ಅಭಿಮಾನಿಗಳನ್ನು ಟ್ರೋಲ್ ಮಾಡಲು ಉಪಯೋಗಿಸಿದ ಅಸ್ತ್ರ ಧೋನಿ ಅಭಿಮಾನಿಗಳಿಗೆ ಧೋನಿ ಮೇಲೆ ಮತ್ತಷ್ಟು ಗೌರವ ಬರುವಂತೆ ಮಾಡಿದೆ. ಮಾಜಿ ನಾಯಕ ಎಂಎಸ್ ಧೋನಿ ತ್ರಿವರ್ಣ ಧ್ವಜ ಇರುವ ಹೆಲ್ಮೆಟ್ ಯಾಕೆ ಧರಿಸುವುದಿಲ್ಲ ಎನ್ನುವ ಅಭಿಮಾನಿಗಳ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಸಚಿನ್ ತೆಂಡೂಲ್ಕರ್, ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಸೇರಿದಂತೆ ಹಲವು ಆಟಗಾರರು ಬಿಸಿಸಿಐ ಲೋಗೋದ ಕೆಳಗೆ ಅಥವಾ ಮೇಲುಗಡೆ ತ್ರಿವರ್ಣ ಧ್ವಜ ಇರುವ ಹೆಲ್ಮೆಟ್ ಧರಿಸುತ್ತಾರೆ. ಆದರೆ ಧೋನಿ ತ್ರಿವರ್ಣ ಧ್ವಜ ಇರುವ ಹೆಲ್ಮೆಟ್ ಧರಿಸದೇ ಅಂಗಳಕ್ಕೆ ಇಳಿಯುತ್ತಿದ್ದರು. ಹೀಗಾಗಿ ಯಾಕೆ ಧೋನಿ ತ್ರಿವರ್ಣ ಧ್ವಜ ಇರುವ ಹೆಲ್ಮೆಟ್ ಧರಿಸಲ್ಲ ಎನ್ನುವ ಪ್ರಶ್ನೆಯನ್ನು ಅಭಿಮಾನಿಗಳು ಕೇಳುತ್ತಿದ್ದರು.

ಧೋನಿ ವಿಕೆಟ್ ಕೀಪಿಂಗ್ ಮಾಡುವ ವೇಳೆ ಕೆಲ ಸಮಯ ಹೆಲ್ಮೆಟ್ ಬಿಚ್ಚಿಟ್ಟು ಕೀಪಿಂಗ್ ಮಾಡುತ್ತಾರೆ. ಈ ಸಮಯದಲ್ಲಿ ಹೆಲ್ಮೆಟ್ ಅನ್ನು ನೆಲದ ಮೇಲೆ ಬಿಚ್ಚಿಡಬೇಕಾಗುತ್ತದೆ. ಹೆಲ್ಮೆಟ್ ಮೇಲೆ ತ್ರಿವರ್ಣ ಧ್ವಜ ಇದ್ದರೆ ಅದಕ್ಕೆ ಅಪಮಾನ ಮಾಡಿದ ಹಾಗೇ ಎಂಬ ಕಾರಣಕ್ಕೆ ಧೋನಿ ತ್ರಿವರ್ಣ ಧ್ವಜ ಇಲ್ಲದ ಹೆಲ್ಮೆಟ್ ಧರಿಸುತ್ತಾರೆ ಎಂದು ತಿಳಿದು ಬಂದಿದೆ. ಈ ವಿಷಯ ತಿಳಿದ ಕ್ರಿಕೆಟ್ ಅಭಿಮಾನಿಗಳು ಧೋನಿಯನ್ನು ಮತ್ತಷ್ಟು ಪ್ರಶಂಸಿಸಿದ್ದಾರೆ.    

short by Pawan / read more at News Kannada

Comments