Skip to main content


ಕಟ್ಟಡದಿಂದ ಬೀಳ್ತಿದ್ದ ಮಹಿಳೆಯನ್ನ ಕ್ಯಾಚ್ ಹಿಡಿದು ಜೀವ ಉಳಿಸಿದ ಹೀರೋ ಪೊಲೀಸ್

ಪೊಲೀಸ್ ಅಧಿಕಾರಿಯೊಬ್ಬರು ತನ್ನ ಪ್ರಾಣವನ್ನು ಲೆಕ್ಕಿಸದೆ ಕಟ್ಟಡದ ಮೇಲಿಂದ ಬೀಳ್ತಿದ್ದ ಮಹಿಳೆಯೊಬ್ಬರ ಜೀವ ಉಳಿಸಿದ ಘಟನೆ ಚೀನಾದಲ್ಲಿ ನಡೆದಿದ್ದು, ಅವರನ್ನು ಸಾರ್ವಜನಿಕರು “ರಿಯಲ್ ಸೂಪರ್ ಮ್ಯಾನ್” ಎಂದು ಕರೆದಿದ್ದಾರೆ.
ನಿಸ್ವಾರ್ಥ ಪೊಲೀಸ್ ಅಧಿಕಾರಿ ಕಟ್ಟಡದಿಂದ ಕೆಳಗೆ ಬೀಳ್ತಿದ್ದ ಮಹಿಳೆಯನ್ನು ಕ್ಯಾಚ್ ಹಿಡಿದು ಆಕೆಯ ಜೀವ ಉಳಿಸಿದ್ದಾರೆ. ಆದ್ರೆ ಇದರಿಂದ ಪೊಲೀಸ್ ಅಧಿಕಾರಿಯ ಬೆನ್ನಿನ ಕೆಳಭಾಗಕ್ಕೆ ಗಾಯವಾಗಿದೆ. ಘಟನೆಯ ರೋಚಕ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ. ಪೊಲೀಸ್ ಅಧಿಕಾರಿಯನ್ನು ಸೂಪರ್ ಹೀರೋ ಎಂದು ಪ್ರಶಂಸಿಸಲಾಗುತ್ತಿದೆ.     
short by: NP / read more at Publictv.in