Skip to main content


ಸಿದ್ಧಾಂತ ಇಲ್ಲದ ಶಾ ನಮಗೆ ನೀತಿ ಪಾಠ ಹೇಳೋ ಅಗತ್ಯವಿಲ್ಲ: ದಿನೇಶ್ ಗುಂಡೂರಾವ್

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಗೆ ಸಿದ್ಧಾಂತವಿಲ್ಲ. ಅವರು ಬಂದು ನೀತಿ ಪಾಠ ಮಾಡುವ ಅಗತ್ಯವಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಸಿಎಂ ಗೃಹ ಕಛೇರಿ ಕೃಷ್ಣದಲ್ಲಿ ಮಾತನಾಡಿದ ಅವರು, ಚಾಣಾಕ್ಷ ಅಂತ ಆಗಬೇಕಾದ್ರೆ ಸಿದ್ಧಾಂತಗಳನ್ನು ಬಿಡಬೇಕು. ಈ ಸಮಯದಲ್ಲಿ ಬಂದು ಮಠ ಮಾನ್ಯಗಳನ್ನು ಭೇಟಿ ಮಾಡುತ್ತಿದ್ದಾರೆ ಎಂದು ದೂರಿದರು.

ಜೆಡಿಎಸ್ ಬಿಜೆಪಿ ಮೈತ್ರಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪ್ರಗತಿಪರರು ಮೈತ್ರಿ ಬಗ್ಗೆ ಹೇಳಲಿಲ್ಲ. ಕೋಮುವಾದಿ ಪಕ್ಷವನ್ನು ಸೋಲಿಸಲು ಪ್ರಗತಿಪರರು ಜಾತ್ಯಾತೀತ ಪಕ್ಷಗಳು ಒಂದಾಗಬೇಕು ಎಂದು ಹೇಳಿದ್ದಾರೆ. ಆದರೆ ಜೆಡಿಎಸ್ ನವರು ಜಾತ್ಯಾತೀತರಲ್ಲ ಅವರು ಸಿದ್ಧಾಂತ ಬಿಟ್ಟವರು ಎಂದರು.       

short by NP / read more at Public TV

Comments