Skip to main content


ವಿಷ್ಣು ಪುಣ್ಯಭೂಮಿಯಲ್ಲಿ ‘ದಿ ವಿಲನ್’ ಕಿಚ್ಚನ ಎಂಟ್ರಿ ಸಾಂಗ್!

ಸ್ಯಾಂಡಲ್ ವುಡ್ ಅಂಗಳದಲ್ಲಿ ಭಾರಿ ಕ್ರೇಜ್ ಹುಟ್ಟುಹಾಕಿರುವ ಸುದೀಪ್ ಶಿವಣ್ಣ ಕಾಂಬಿನೇಷನ್ನಿನ ದಿ ವಿಲನ್ ಚಿತ್ರ ದಿನೇ ದಿನೇ ಚಿತ್ರ ರಸಿಕರಲ್ಲಿ ತರತರನಾದ ನಿರೀಕ್ಷೆ ಬೆಟ್ಟಮಾಡುತ್ತಿದೆ.  
ಈ ಚಿತ್ರಕ್ಕೆ ಸಂಭಂದಿಸಿದ ಸ್ಪೆಷಲ್ ವಿಚಾರವೊಂದ ಕಿಚ್ಚ ಅಭಿಮಾನಿ ಬಳಗದ ಕಡೆಯಿಂದ ಸೋಷಿಯಲ್ ಮೀಡಿಯಾದಲ್ಲಿ ತೂರಿ ಬರುತ್ತಿದ್ದು ಚಿತ್ರದ ಕಿಚ್ಚ ಸುದೀಪ್ ಎಂಟ್ರಿ ಸಾಂಗ್ ಅನ್ನು ಸಾಹಸಸಿಂಹ ವಿಷ್ಣುವರ್ಧನ್ ಪುಣ್ಯಭೂಮಿ (ಸಮಾಧಿಸ್ಥಳ)ಯಲ್ಲಿ ಸುಮಾರು ಒಂದು ತಿಂಗಳ ಹಿಂದೆಯೇ ಚಿತ್ರೀಕರಿಸಲಾಗಿದೆ ಎಂಬ ವಿಚಾರ ಸೋಷಿಯಲ್ ಮೀಡಿಯಾಗಳಲ್ಲಿ ಸುದ್ದಿಯಾಗುತ್ತಿದೆ. ಇದಕ್ಕೆ ಸಾಕ್ಷಿಯೇನೆಂಬಂತೆ ಪುಣ್ಯಭೂಮಿಯಲ್ಲಿ ನಡೆದಿರುವ ಕಿಚ್ಚನ ಶೂಟಿಂಗ್ ಫೋಟೋಗಳನ್ನು ಕ್ಲಿಕ್ಕಿಸಿಕೊಂಡು ತಮ್ಮ ಫೇಸ್ಬುಕ್ ಅಕೌಂಟ್ ಗಳಲ್ಲಿ ಅಪ್ಲೋಡ್ ಮಾಡಿದ್ದಾರೆ.. ಆ ಫೋಟೋಗಳನ್ನು ನೋಡಿದರೆ ವಿಷ್ಣು ಪುಣ್ಯಭೂಮಿಯಲ್ಲಿ ದಿ ವಿಲನ್ ಚಿತ್ರದ ಶೂಟಿಂಗ್ ನಡೆದಿರುವುದಂತೂ ಪಕ್ಕಾ ಅಂತ ಅನಿಸುತ್ತದೆ ಆದರೆ ಅದು ದೃಶ್ಯದ ಶೂಟಿಂಗಾ? ಅಥವಾ ಹಾಡಿನ ಶೂಟಿಂಗಾ? ಚಿತ್ರತಂಡವೇ ಹೇಳಬೇಕು.             
Short by: Pawanraj / read more at aralikatte