Skip to main content


ಟಾಲಿವುಡ್ ಮಲ್ಟಿಸ್ಟಾರ್ ಸಿನಿಮಾದಲ್ಲಿ ಸ್ಥಾನ ಗಿಟ್ಟಿಸಿದ "ಚಮಕ್" ಚಲುವೆ

ಕನ್ನಡದಲ್ಲಿ ಸದ್ಯ ಲಕ್ಕಿ ಸ್ಟಾರ್ ಆಗಿರುವ ನಟಿ ಅಂದರೆ ರಶ್ಮಿಕಾ ಮಂದಣ್ಣ. 'ಕಿರಿಕ್ ಪಾರ್ಟಿ' ಸಿನಿಮಾದ ಮೂಲಕ ಸೈಲೆಂಟ್ ಆಗಿ ಇಂಡಸ್ಟ್ರಿಗೆ ಬಂದ ರಶ್ಮಿಕಾ ನಂತರ ಒಂದರ ನಂತರ ಒಂದರಂತೆ ಕನ್ನಡದ ಬಿಗ್ ಸ್ಟಾರ್ ಗಳ ಜೊತೆಗೆ ಸಿನಿಮಾ ಮಾಡಿದರು. ಮಾತ್ರವಲ್ಲದೆ ಟಾಲಿವುಡ್ ನಲ್ಲಿ ಕೂಡ ರಶ್ಮಿಕಾ ಸಿನಿಮಾ ಮಾಡಿ ಬಂದರು.

'ಚಲೋ' ಸಿನಿಮಾದ ಮೂಲಕ ತೆಲುಗಿನಲ್ಲಿ ಕೆರಿಯರ್ ಶುರು ಮಾಡಿದ್ದ ರಶ್ಮಿಕಾ ಈಗ ಮತ್ತೊಂದು ಹಂತ ತಲುಪಿದ್ದಾರೆ. ತೆಲುಗಿನ ಜನಪ್ರಿಯ ನಟರಾದ ಅಕ್ಕಿನೇನಿ ನಾಗಾರ್ಜುನ ಮತ್ತು ನಾನಿ ಕಾಂಬಿನೇಶನ್ ನಲ್ಲಿ ಒಂದು ಹೊಸ ಮಲ್ಟಿಸ್ಟಾರ್ ಸಿನಿಮಾ ಬರುತ್ತಿದೆ. ಈ ಸಿನಿಮಾದ ನಾಯಕಿಯಾಗಿ ಕನ್ನಡದ ನಟಿ ರಶ್ಮಿಕಾ ಮಂದಣ್ಣ ಸೆಲೆಕ್ಟ್ ಆಗಿದ್ದಾರೆ. ಚಿತ್ರದ ಹೀರೋಯಿನ್ ಪಾತ್ರಕ್ಕೆ ಅನೇಕ ನಟಿಯರನ್ನು ಹುಡುಕಾಟ ನೆಡೆಸಿದ ಈ ಚಿತ್ರತಂಡ ಕೊನೆಗೆ ರಶ್ಮಿಕಾ ಮಂದಣ್ಣ ಅವರನ್ನು ಆಯ್ಕೆ ಮಾಡಿದೆ. ಇನ್ನು ಶ್ರೀರಾಮ್ ಆದಿತ್ಯ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

short by Pawan / read more at Filmibeat

Comments