Skip to main content


ಆಧಾರ್‌ ಗಡುವು ವಿಸ್ತರಣೆ!

ಸರ್ಕಾರದ ಕೆಲವು ಯೋಜನೆಗಳು, ಸೌಲಭ್ಯಗಳು, ಬ್ಯಾಂಕ್‌ ಖಾತೆಗಳು ಮತ್ತು ಮೊಬೈಲ್‌ ಸಿಮ್‌ಗೆ ಆಧಾರ್‌ ಜೋಡಣೆಗೆ ನೀಡಲಾಗಿದ್ದ ಮಾರ್ಚ್‌ 31ರ ಗಡುವನ್ನು ಸುಪ್ರೀಂ ಕೋರ್ಟ್‌ ವಿಸ್ತರಿಸಿದೆ. ಆಧಾರ್‌ ಯೋಜನೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಸಂವಿಧಾನ ಪೀಠವು ವಿಚಾರಣೆ ನಡೆಸಿ ತೀರ್ಪು ನೀಡುವವರೆಗೆ ಗಡುವನ್ನು ಮುಂದಕ್ಕೆ ಹಾಕಲಾಗಿದೆ. ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠವು ಈಗ ಗಡುವನ್ನು ಅನಿರ್ದಿಷ್ಟಾವಧಿಗೆ ವಿಸ್ತರಿಸಿದೆ.

‘ತತ್ಕಾಲ್‌ ಯೋಜನೆ ಅಡಿ ಪಾಸ್‌ಪೋರ್ಟ್‌ ಪಡೆಯಲು ಆಧಾರ್‌ ಮಾಹಿತಿ ನೀಡುವುದನ್ನು ಕಡ್ಡಾಯ ಮಾಡಲಾಗಿದೆ. ತತ್ಕಾಲ್‌ ಪಾಸ್‌ಪೋರ್ಟ್‌ಗೂ ಆಧಾರ್‌ನಿಂದ ವಿನಾಯಿತಿ ನೀಡಬೇಕು’ ಎಂದು ಹಿರಿಯ ವಕೀಲರಾದ ಅರವಿಂದ ದಾತಾರ್‌ ಮತ್ತು ಶ್ಯಾಮ್‌ ದಿವಾನ್‌ ಕೋರಿದರು. ಈ ಮನವಿಯನ್ನು ಪೀಠ ಒಪ್ಪಿಕೊಂಡಿದೆ.      

short by: NP / read more at Prajavani

Comments