Skip to main content


ದರ್ಶನ್ ಎದುರಲ್ಲೇ ಸಿಕ್ಕಿದ್ದರೂ ಮಾತನಾಡಿಸದೆ ಹೊರಟ ಈ ಸ್ಯಾಂಡಲ್‍ವುಡ್ ನಟಿ!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಎದುರಲ್ಲೇ ಸಿಕ್ಕಿದ್ದರೂ ನಟಿಯೊಬ್ಬರು ಮಾತನಾಡಿಸದೆ ಹೊರಟುಹೋಗಿದ್ದಾರೆ. ಆಕೆ ಬೇರೆ ಯಾರೂ ಅಲ್ಲ ಸ್ಯಾಂಡಲ್‍ವುಡ್ ಕೆಂಡಸಂಪಿಗೆ ಮಾನ್ವಿತಾ ಹರೀಶ್.

ಕಳೆದ ಬಾರಿಯ ದಸರಾ ಹಬ್ಬದ ಯುವ ದಸರಾಕ್ಕಾಗಿ ತಾರೆಗಳೆಲ್ಲಾ ಮೈಸೂರಿನ ಸಂದೇಶ್ ಪ್ರಿನ್ಸ್ ಹೊಟೇಲ್‍ನಲ್ಲಿ ವಾಸ್ತವ್ಯ ಹೂಡಿದ್ದರು. ದರ್ಶನ್ ಅದೇ ಹೊಟೇಲ್‍ನಲ್ಲಿ ತಂಗಿರೋದು ಮಾನ್ವಿತಾಗೆ ಗೊತ್ತಿರಲಿಲ್ಲ. ಕಾರ್ಯಕ್ರಮಕ್ಕೆ ಹೋಗುವಾಗ ಹೊಟೇಲ್ ಹೊರಗಡೆಯ ಮೆಟ್ಟಿಲಿನಲ್ಲಿ ದರ್ಶನ್ ತಮ್ಮ ಒಂದಿಷ್ಟು ಸ್ನೇಹಿತರ ಜೊತೆ ಕುಳಿತಿದ್ದರು. ಆಗ ಮಾನ್ವಿತಾ ಯಾರೋ ಕುಳಿತಿರಬಹುದು ಎಂದು ಅಲ್ಲಿ ಗಮನಿಸದೆ ಕಾರ್ ಹತ್ತಿದ್ದಾರೆ.

ನಂತರ ಅಲ್ಲಿಯೇ ಒಬ್ಬರು ಮಾನ್ವಿತಾಗೆ ದರ್ಶನ್ ಇರುವ ವಿಚಾರ ಹೇಳಿದ್ದರು. ಆ ಕೂಡಲೇ ಮಾನ್ವಿತಾ ತಬ್ಬಿಬ್ಬಾಗಿ ಸುತ್ತಲೂ ನೋಡಿದ್ದು, ಕೊನೆಗೆ ಮಾನ್ವಿತಾ, ದರ್ಶನ್‍ರನ್ನು ಹುಡುಕೋದರಲ್ಲಿ ವಿಫಲರಾದಾಗ ಮತ್ತೊಬ್ಬರು ಬಂದು ದರ್ಶನ್ ಮೆಟ್ಟಿಲ ಮೇಲೆ ಕುಳಿತಿದ್ದಾರೆ ಎಂದು ಹೇಳಿದ್ದರು. ದರ್ಶನ್ ಬಳಿ ಬಂದು ಒಬ್ಬ ಬಿಗ್ ಸ್ಟಾರ್ ಮೆಟ್ಟಿಲ ಮೇಲೆ ಹೀಗೆ ಕುಳಿತುಕೊಂಡರೆ, ಯಾರ್ ಗುರುತು ಹಿಡೀತಾರೆ. ಯಾಕೆ ಹೀಗೆ ಕುಳಿತ್ತಿದೀರಿ ಎಂದು ಕೇಳಿದ್ದಾರೆ. ಅದಕ್ಕೆ ದರ್ಶನ್, ನಾನು ಹೀಗೇ ಇರೋದು ಎಂದು ಹೇಳಿದ್ದಾರೆ. ನಂತರ ಮಾನ್ವಿತಾ ಮಾತನಾಡಿಸದೇ ಹೋಗಿದ್ದಕ್ಕೆ ಕ್ಷಮೆ ಕೇಳಿ ಅಲ್ಲಿಂದ ಹೊರಟರು.

short by Pawan / read more at Public Tv

Comments