Skip to main content


ಎಟಿಎಂ ಬಳಕೆದಾರರಿಗೆ ಇಲ್ಲಿದೆ ಶಾಕಿಂಗ್ ನ್ಯೂಸ್…!?

ಪ್ರಸ್ತುತ ಬಹುತೇಕ ಬ್ಯಾಂಕ್ ಗಳ ಎ.ಟಿ.ಎಂ. ಗಳಲ್ಲಿ ನಗದು ಕೊರತೆ ಎದುರಾಗಿದೆ. ಜನರಂತೂ ಹಣ ಪಡೆಯಲು ಎ.ಟಿ.ಎಂ.ನಿಂದ ಎ.ಟಿ.ಎಂ.ಗೆ ಅಲೆದಾಡುವಂತಾಗಿದೆ. ಎ.ಟಿ.ಎಂ. ಗಳಿಗೆ ಸಕಾಲಕ್ಕೆ ಸರಿಯಾಗಿ ನಗದು ಪೂರೈಕೆಯಾಗದ ಕಾರಣ ಹೆಚ್ಚಿನ ಕಡೆಗಳಲ್ಲಿ ನೋ ಕ್ಯಾಶ್ ಬೋರ್ಡ್ ಹಾಕಲಾಗಿದೆ.
ಅಭ್ಯರ್ಥಿಗಳ ಖರ್ಚು ವೆಚ್ಚದ ಮೇಲೆ ನಿಗಾ ಇಡಲಿರುವ ಆಯೋಗ ಇದರ ಭಾಗವಾಗಿ ನಗದು ಪಡೆಯಲು ಮಿತಿ ಹೇರುವ ಸಾಧ್ಯತೆ ಇದೆ. ನೋಟ್ ಬ್ಯಾನ್ ಮಾಡಿದ ಸಂದರ್ಭದಲ್ಲಿ ಒಬ್ಬರು ದಿನಕ್ಕೆ ಇಷ್ಟೇ ಹಣ ಪಡೆಯಬೇಕೆಂಬ ಮಿತಿ ಹೇರಲಾಗಿತ್ತು. ಅದೇ ರೀತಿ ಎಲೆಕ್ಷನ್ ಮುಗಿಯುವವರೆಗೂ ಬ್ಯಾಂಕ್, ಎ.ಟಿ.ಎಂ. ಗಳಲ್ಲಿ ನಗದು ಪಡೆಯಲು ಮಿತಿ ಹೇರಲು ಆಯೋಗ ಚಿಂತನೆ ನಡೆಸಿದೆ ಎನ್ನಲಾಗಿದೆ. ಚುನಾವಣೆಯಲ್ಲಿ ಹಣದ ಹರಿವು ಜಾಸ್ತಿಯಾಗಲಿರುವ ಹಿನ್ನಲೆಯಲ್ಲಿ ಮೊದಲೇ ಈ ಬಗ್ಗೆ ಕಡಿವಾಣ ಹಾಕಲು ಆಯೋಗ ಯೋಜಿಸಿದ್ದು, ಬ್ಯಾಂಕ್ ಗಳೊಂದಿಗೆ ಚರ್ಚಿಸಲು ಮುಂದಾಗಿದೆ. ಹಾಗಾಗಿ ನಗದು ಪಡೆಯಲು ಮಿತಿ ಹೇರುವ ಸಾಧ್ಯತೆ ಇದೆ ಎಂಬ ಮಾಹಿತಿಯಿದೆ.    
short by: NP / read more at Kannada dunia