Skip to main content


ತೆಂಗಿನ ಕಾಯಿಗಾಗಿ ನದಿಗೆ ಧುಮುಕಿದ ಯುವಕ ದಾರುಣ ಸಾವು

ನದಿ ನೀರಿನಲ್ಲಿ ಬಿದ್ದ ತೆಂಗಿನ ಕಾಯಿಯನ್ನು ತರಲು ನದಿಗೆ ಧುಮುಕಿದ ಯುವಕನೋರ್ವ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಸಂಭವಿಸಿದೆ. ಈ ಖೇದಕರ ಘಟನೆ ಕುಂದಬಾರಂದಾಡಿ ಗ್ರಾಮದ ತೊರೊಳ್ಳಿಯಲ್ಲಿ ವರದಿಯಾಗಿದ್ದು, ತೊರೊಳ್ಳಿಯ ದಿ. ವಾಸುದೇವ ಭಂಡಾರಿಯವರ ಪುತ್ರ ರಂಜಿತ್(25) ಸಾವನ್ನಪ್ಪಿದ ದುರ್ದೈವಿ. ರಂಜಿತ್ ಭಂಡಾರಿ ಮಂಗಳೂರಿನಲ್ಲಿ ಹೇರ್ ಕಟ್ಟಿಂಗ್ ಕೆಲಸ ನಿರ್ವಹಿಸುತ್ತಿದ್ದು, ಮನೆ ಸಮೀಪದ ಹೊಳ್ಮಗೆ ಹಬ್ಬಕ್ಕಾಗಿ ಊರಿಗೆ ಆಗಮಿಸಿದ್ದರು. ಇನ್ನೇನು ಕೆಲವೇ ದಿನಗಳಲ್ಲಿ ರಂಜಿತ್ ಬೇರೆ ಉದ್ಯೋಗಕ್ಕಾಗಿ ಬೆಂಗಳೂರಿಗೆ ತೆರಳುವವರಿದ್ದರು ಎನ್ನಲಾಗಿದೆ.     

short by: NP / read more at Karavalikarnataka.com

Comments