Skip to main content


ಪಿವಿ ಸಿಂಧು ನಿರ್ಗಮನ

ಭಾರತದ ಅಗ್ರ ಷಟ್ಲರ್, ರಿಯೋ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪಿವಿ ಸಿಂಧು ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್​ಷಿಪ್​ನಲ್ಲಿ ಸೆಮಿಫೈನಲ್​ನಲ್ಲಿ ನಿರ್ಗಮಿಸಿದ್ದಾರೆ. ಈ ಮೂಲಕ ಸಿಂಧು ಈ ಪ್ರತಿಷ್ಠಿತ ಟೂರ್ನಿಯಲ್ಲಿ ಪ್ರಶಸ್ತಿ ಸುತ್ತಿಗೇರಿದ ಭಾರತ 2ನೇ ಸಾಧಕಿ ಎನಿಸಿಕೊಳ್ಳುವಲ್ಲಿ ವಿಫಲಗೊಂಡರು. ಶನಿವಾರ ನಡೆದ ಮಹಿಳಾ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ವಿಶ್ವ ನಂ.3 ಆಟಗಾರ್ತಿ ಸಿಂಧು 21-19, 19-21, 18-21ರಿಂದ ಜಪಾನ್​ನ ವಿಶ್ವ ನಂ.2 ಆಟಗಾರ್ತಿ ಅಕಾನೆ ಯಮಗುಚಿ ವಿರುದ್ಧದ ಕಠಿಣ ಹೋರಾಟದಲ್ಲಿ ಪರಾಭವಗೊಂಡರು. ಇದರಿಂದ ಟೂರ್ನಿಯಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ. ಮೊದಲ ಗೇಮ್ ಅನ್ನು ಭರ್ಜರಿಯಾಗಿ ಆರಂಭಿಸಿದ ಸಿಂಧು 5-0ಯ ಪಾಯಿಂಟ್​ಗಳಲ್ಲಿ ಮುನ್ನಡೆ ಸಾಧಿಸಿದರು. ನಂತರ 3 ಸತತ ಅಂಕ ಸಂಪಾದಿಸಿದ ಯಮಗುಚಿ ಹಿನ್ನಡೆಯನ್ನು 5-10ಕ್ಕಿಳಿಸಿದರೆ, ಅಂತಿಮವಾಗಿ 17-17ರ ಸಮಬಲ ಸಾಧಿಸಿದ್ದರು. ಆದರೆ ಸಿಂಧು ಸತತ 2 ಪಾಯಿಂಟ್ ಸಾಧಿಸಿ ಮೊದಲ ಗೇಮ್ ಗೆದ್ದರು. 2ನೇ ಗೇಮ್ಲ್ಲಿ ಲಯಕ್ಕೆ ಮರಳಿದ ಯಮಗುಚಿ ಗೆಲುವು ಕಂಡರು. ನಿರ್ಣಾಯಕ ಗೇಮ್ಲ್ಲಿ ಉತ್ತಮ ಆರಂಭ ಕಂಡರೂ ಅಂತಿಮವಾಗಿ ಎಡವಿದರು.
               
Short by: Prajwal / read more at Vijayavani