Skip to main content


ರಾಜಮೌಳಿ ಮುಂದಿನ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿ?

ಬಾಹುಬಲಿ ನಂತರ ನಿರ್ದೇಶಕ ರಾಜಮೌಳಿ ಹೊಸಚಿತ್ರದ ಘೋಷಣೆ ಮಾಡಿದ್ದಾರೆ . ಆರ್ ಆರ್ ಆರ್ ಟೈಟಲ್ ನ ಈಚಿತ್ರದಲ್ಲಿ ಜ್ಯೂ . ಎನ್ ಟಿಆರ್ ಹಾಗೂ ರಾಮಚರಣ್ ತೆರೆಹಂಚಿಕೊಳ್ಳಲಿದ್ದಾರೆ.

ರಾಜಮೌಳಿ ಅವರು ಇತ್ತೀಚೆಗಷ್ಟೇ ಈ ಚಿತ್ರದ ಘೋಷಣೆ ಮಾಡಿದ್ದು, ಸದ್ಯ ನಿರ್ದೇಶಕರು ಸ್ಟ್ರಿಪ್ಟ್ ವರ್ಕ್ ನಲ್ಲಿ ನಿರತರಾಗಿದ್ದಾರೆ. ರಾಜಮೌಳಿ ಅವರ ಈ ಹೊಸ ಚಿತ್ರದಲ್ಲಿ ನಟಿ ಯಾರಾಗಲಿದ್ದಾರೆ ಎನ್ನುವ ಚರ್ಚೆ ಶುರುವಾಗಿದ್ದು, ಈ ಚಿತ್ರದ ನಾಯಕಿಯ ಪಾತ್ರಕ್ಕೆ ಈ ಮೊದಲು ರಾಕುಲ್ ಪ್ರೀತ್ ಸಿಂಗ್, ಸಮಂತಾ ಅಕ್ಕಿನೇನಿ ಹಾಗೂ ರಾಶಿ ಖನ್ನಾ ಅವರ ಹೆಸರು ಕೇಳಿ ಬಂದಿದ್ದವು. ಇದೀಗ ರಶ್ಮಿಕಾ ಮಂದಣ್ಣ ಅವರ ಹೆಸರು ಮುಂಚೂಣಿಯಲ್ಲಿದೆ.

ಆರ್ ಆರ್ ಆರ್ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ಅವರಿಗೆ ಆಫರ್ ನೀಡಲು ಚಿತ್ರ ತಂಡ ಪ್ಲಾನ್ ಮಾಡಿದೆಯಂತೆ. ಇನ್ನಷ್ಟೇ ಈ ಕುರಿತು ಅಧಿಕೃತ ಘೋಷಣೆಯಾಗಲಿದೆ ಎನ್ನುತ್ತಿವೆ ಮೂಲಗಳು.    

short by Pawan / read more at Kannada News Now

Comments