Skip to main content


ವಿದೇಶಾಂಗ ಸಚಿವೆಯಾಗಿ ಸುಷ್ಮಾ ಸ್ವರಾಜ್ ವಿಫಲರಾಗಿದ್ದಾರೆಯೇ? 

ಇರಾಕ್‌ನಲ್ಲಿ 39 ಭಾರತೀಯರ ಹತ್ಯೆ ವಿಚಾರದಲ್ಲಿ ವಿದೇಶಾಂಗ ಸಚಿವೆಯಾಗಿ ಸುಷ್ಮಾ ಸ್ವರಾಜ್ ವಿಫಲರಾಗಿದ್ದಾರೆಯೇ? ಎಂದು ಕಾಂಗ್ರೆಸ್ ಟ್ವಿಟರ್‌ನಲ್ಲಿ ನಡೆಸಿದ್ದ ಸಮೀಕ್ಷೆಯ ಫಲಿತಾಂಶವನ್ನು ಸ್ವತಃ ಸುಷ್ಮಾ ಸ್ವರಾಜ್ ರಿಟ್ವೀಟ್ ಮಾಡಿದ್ದಾರೆ.

‘ಇರಾಕ್‌ನಲ್ಲಿ 39 ಭಾರತೀಯರ ಹತ್ಯೆ ವಿಚಾರದಲ್ಲಿ ವಿದೇಶಾಂಗ ಸಚಿವೆಯಾಗಿ ಸುಷ್ಮಾ ಸ್ವರಾಜ್ ವಿಫಲರಾಗಿದ್ದಾರೆ ಎಂದು ನೀವು ಭಾವಿಸಿದ್ದೀರಾ’ ಎಂದು ಕಾಂಗ್ರೆಸ್ ತನ್ನ ಟ್ವಿಟರ್ ಖಾತೆಯಲ್ಲಿ ಸುಷ್ಮಾ ವಿರುದ್ಧ ಜನಾಭಿಪ್ರಾಯ ಸಂಗ್ರಹಿಸಲು ಪ್ರಶ್ನೆ ಕೇಳಿತ್ತು.

ಈ ಸಮೀಕ್ಷೆಯಲ್ಲಿ 39,879 ಮಂದಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಅದರಲ್ಲಿ ಶೇ 76ರಷ್ಟು ಮಂದಿ ‘ಇಲ್ಲ’ ಎಂದಿದ್ದರೆ, ಶೇ 24ರಷ್ಟು ಮಂದಿ ‘ಹೌದು’ ಎಂದು ಹೇಳಿದ್ದಾರೆ. ಸಮೀಕ್ಷೆಯ ಅಂತಿಮ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಸುಷ್ಮಾ, ಅದನ್ನು ರಿಟ್ವೀಟ್ ಮಾಡಿದ್ದಾರೆ.      

short by NP/ read more at Prajavani

Comments