Skip to main content


ಸೆಮಿಫೈನಲ್​ಗೆ ಪಿವಿ ಸಿಂಧು

ವಿಶ್ವ ನಂ.3 ಷಟ್ಲರ್ ಪಿವಿ ಸಿಂಧು ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್​ಷಿಪ್​ನಲ್ಲಿ ಸೆಮಿಫೈನಲ್​ಗೆ ಲಗ್ಗೆ ಇಟ್ಟಿದ್ದಾರೆ.ಅಗ್ರ ಷಟ್ಲರ್ ಕಿಡಂಬಿ ಶ್ರೀಕಾಂತ್ ಪ್ರಿಕ್ವಾರ್ಟರ್ ಫೈನಲ್​ನಲ್ಲಿ ನಿರ್ಗಮಿಸಿದರೆ, ಎಚ್ ಎಸ್ ಪ್ರಣಯ್ ಕ್ವಾರ್ಟರ್ ಫೈನಲ್​ಗೇರಿದರು. ಶುಕ್ರವಾರ ನಡೆದ ಮಹಿಳಾ ಸಿಂಗಲ್ಸ್ ವಿಭಾಗದ ರೋಚಕ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸಿಂಧು 20-22, 21-18, 21-18ರಿಂದ ವಿಶ್ವ ಚಾಂಪಿಯನ್ ಜಪಾನ್​ನ ನಜೋಮಿ ಒಕುಹರಾರನ್ನು ಸೋಲಿಸಿ ಉಪಾಂತ್ಯಕ್ಕೆ ಲಗ್ಗೆ ಇಟ್ಟರು. ಮೊದಲ ಗೇಮ್ಲ್ಲಿ ಸಮಬಲದ ಹೋರಾಟ ನೀಡಿದರೂ ಸೋತ ಸಿಂಧು, ನಂತರದ ಎರಡೂ ಗೇಮ್ಳಲ್ಲಿ ಅದ್ಭುತವಾಗಿ ಲಯಕ್ಕೆ ಮರಳಿದರು. 2ನೇ ಗೇಮ್ ಅನ್ನು 0-1 ಪಾಯಿಂಟ್ ಹಿನ್ನಡೆಯಿಂದ ಆರಂಭಿಸಿದ ಸಿಂಧು ಅಂತಿಮವಾಗಿ 18-18ರ ಲಯಕ್ಕೆ ಮರಳಿ ಗೆದ್ದರು. ನಿರ್ಣಾಯಕ ಗೇಮ್ಲ್ಲೂ ಸಿಂಧು ಆರಂಭದಲ್ಲೆ 2-4ರ ಹಿನ್ನಡೆಯೊಂದಿಗೆ ಸೋಲಿನ ಭೀತಿಯಲ್ಲಿದ್ದರು. ಆದರೆ ಅಂತಿಮವಾಗಿ ಅತ್ಯಂತ ಚುರುಕಿನಿಂದ ಆಡಿದ ಸಿಂಧು ಆಕರ್ಷಕ ಸ್ಮಾಷ್​ಗಳೊಂದಿಗೆ ನಜೋಮಿಯನ್ನು ಕಂಗೆಡಿಸಿದರು.          
Short by: Prajwal / read more at Vijayavani