Skip to main content


ಪೋರ್ನ್ ಇಂಡಸ್ಟ್ರಿಗೆ ಸನ್ನಿ ನನ್ನ ನಂಬರ್‌ ಕೊಟ್ಟಿದ್ದಾರೆ: ರಾಖಿ ಆರೋಪ

ರಾಖಿ ಸಾವಂತ್‌ಗೆ ಪೋರ್ನ್ ಇಂಡಸ್ಟ್ರಿಯಿಂದ ಕಾಲ್ ಹಾಗೂ ಮೆಸೇಜ್ ಬರುತ್ತಿವೆಯಂತೆ. ಇವರ ವಿಡಿಯೋ ಹಾಗೂ ಮೆಡಿಕಲ್ ಸರ್ಟಿಫಿಕೇಟ್‌ ನೀಡುವಂತೆ ಕೇಳಲಾಗುತ್ತಿದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

ಇನ್ನು ಈ ವಿಚಾರವಾಗಿ ಸ್ವಂತಃ ರಾಖಿ ಮಾತನಾಡಿದ್ದಾರೆ. ''ಸನ್ನಿ ಲಿಯೋನ್‌ ಪೋರ್ನ್‌ ಎಂಟರ್‌ಟ್ರೈನ್‌ಮೆಂಟ್ ಇಂಡಸ್ಟ್ರಿಗೆ ನನ್ನ ನಂಬರ್‌ ಕೊಟಿದ್ದಾರೆ. ನನ್ನ ವಿಡಿಯೋ ಹಾಗೂ ಮೆಡಿಕಲ್ ಸರ್ಟಿಫಿಕೇಟ್‌ ಕೇಳುತ್ತಿರುವ ಅವರು, ನನಗೆ ಸಾಕಷ್ಟು ಹಣ ನೀಡುತ್ತೇನೆ ಎನ್ನುತ್ತಿದ್ದಾರೆ. ಆದರೆ, ಅಂತಹ ಕೆಲಸ ಮಾಡಲು ನಂಗೆ ಇಷ್ಟವಿಲ್ಲ. ನಾನು ಸತ್ತರೂ ಕೂಡ ಆ ಇಂಡಸ್ಟ್ರಿಗೆ ಹೋಗುವುದಿಲ್ಲ'' ಎಂದಿದ್ದಾರೆ.

ಇನ್ನು ತನಗೆ ಕರೆ ಮಾಡಿದವರಿಗೆ ನನ್ನ ನಂಬರ್ ಹೇಗೆ ಸಿಕ್ಕಿತ್ತು ಎಂದು ಕೇಳಿದ್ರೆ, ಅವರು ಸನ್ನಿ ಲಿಯೋನ್ ನೀಡಿದ್ದಾರೆ ಎಂದು ಹೇಳುತ್ತಾರೆ ಎಂದು ರಾಖಿ ಸಾವಂತ್‌ ಹೇಳಿದ್ದಾರೆ.

short by: SP / read more at EenaduIndia