Skip to main content


ಈ ಯುಗಾದಿ ಕಿಚ್ಚನ ಅಭಿಮಾನಿಗಳಿಗೆ ಸಿಗಲಿದೆ ಡಬಲ್ ಧಮಾಕ!

ಈ ಯುಗಾದಿ ಹಬ್ಬ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಹರುಷ ತರಲಿದೆ. ಹೌದು, ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಉಗಾದಿಯಂದು ಎರಡು ಸಿಹಿ ಸುದ್ದಿಗಳು ಹಬ್ಬದ ಕೊಡುಗೆಯಾಗಿ ಸಿಗಲಿದೆ.

ಮೊದಲೇನೆಯದು, ಅಭಿಮಾನಿಗಳು ಸಾಕಷ್ಟು ದಿನಗಳಿಂದ ಕಾಯುತ್ತಿರುವ 'ಪೈಲ್ವಾನ್' ಚಿತ್ರದ ಮುಹೂರ್ತ ನೆರವೇರಲಿದೆ. ಏಪ್ರಿಲ್ ತಿಂಗಳಿನಲ್ಲಿ ಚಿತ್ರೀಕರಣ ಪ್ರಾರಂಭ!

ಎರಡನೆಯದು, ಮೊದಲ ಸಿಹಿ ಸುದ್ಧಿಗಿಂತ ಬಹುದೊಡ್ಡ ಸಿಹಿ ಸುದ್ದಿ. ನಿಜ, ಸುದೀಪ್ ಹಾಗೂ ಶಿವರಾಜ್ ಕುಮಾರ್ ಅಭಿನಯದ ದಿ ವಿಲನ್ ಸಿನಿಮಾದ ಟೀಸರ್ ಕೂಡ ಯುಗಾದಿ ಹಬ್ಬಕ್ಕೆ ಬಿಡುಗಡೆ ಮಾಡುವ ಸಾಧ್ಯತೆಗಳು ಹೆಚ್ಚಾಗಿದೆ. ಹಬ್ಬದ ವಿಶೇಷವಾಗಿ ಟೀಸರ್ ರಿಲೀಸ್ ಮಾಡಲು ಚಿತ್ರತಂಡ ತಯಾರಿ ಮಾಡಿಕೊಂಡಿದೆ ಎನ್ನುತಿವೆ ಮೂಲಗಳು.

short by Shraman Jain / read more at Filmibeat Kannada

Comments