Skip to main content


ಕಾಲುನೋವು: ಆಸ್ಟ್ರೇಲಿಯಾದ ವೇಗದ ಬೌಲರ್‌ ಮಿಚೇಲ್‌ ಸ್ಟಾರ್ಕ್‌ ಐಪಿಎಲ್‌ ಆಡಲ್ಲ

ಕಾಲು ನೋವಿನಿಂದ ಬಳಲುತ್ತಿರುವ ಆಸ್ಟ್ರೇಲಿಯಾದ ವೇಗದ ಬೌಲರ್‌ ಮಿಚೇಲ್‌ ಸ್ಟಾರ್ಕ್‌ ಐಪಿಎಲ್‌ನ 11ನೇ ಆವೃತ್ತಿಯಿಂದ ಹೊರಗುಳಿಯಲಿದ್ದಾರೆ. ಇದರಿಂದಾಗಿ ಕೊಲ್ಕತ್ತಾ ನೈಟ್‌ ರೈಡರ್ಸ್‌ ತಂಡಕ್ಕೆ ಬಾರಿ ನಷ್ಟವಾದಂತಾಗಿದೆ.

ಕಾಲು ನೋವಿನಿಂದಾಗಿಯೇ ಅವರು ದಕ್ಷಿಣ ಆಫ್ರಿಕಾ ವಿರುದ್ಧ ಇಂದು ಆರಂಭಗೊಂಡಿರುವ ನಾಲ್ಕನೇ ಟೆಸ್ಟ್‌ ಪಂದ್ಯ ಆಡುತ್ತಿಲ್ಲ. ಅವರ ಬದಲಿಗೆ ಚಡ್‌ ಸೇಯರ್ಸ್‌ರನ್ನು ಕಣಕ್ಕೆ ಇಳಿಸಲಾಗಿದೆ.

‘ಮಿಚೇಲ್‌ ಸ್ಟಾರ್ಕ್‌ ಬಲ ಮೊಣಕಾಲಿನ ನೋವಿನಿಂದ ಬಳಲುತ್ತಿದ್ದಾರೆ. ಟೆಸ್ಟ್‌ ಬಳಿಕ ಹೆಚ್ಚಿನ ವೈದ್ಯಕೀಯ ಪರೀಕ್ಷೆ ಮತ್ತು ವಿಶ್ರಾಂತಿಗಾಗಿ ಮನೆಗೆ ತೆರಳಲಿದ್ದಾರೆ. ಅವರು ಐಪಿಎಲ್‌ ಪಂದ್ಯಗಳನ್ನು ಆಡುವುದಿಲ್ಲ’ ಎಂದು ‘ಕ್ರಿಕೆಟ್‌ ಆಸ್ಟ್ರೇಲಿಯಾ’ ಸಂಸ್ಥೆ ಟ್ವೀಟ್‌ ಮಾಡಿದೆ. ಕೊಲ್ಕತ್ತಾ ನೈಟ್‌ ರೈಡರ್ಸ್‌ ತಂಡ ಎಡಗೈ ವೇಗದ ಬೌಲರ್‌ ಸ್ಟಾರ್ಕ್‌ರನ್ನು ಹರಾಜಿನಲ್ಲಿ ₹ 9.4 ಕೋಟಿ ನೀಡಿ ಖರೀದಿಸಿತ್ತು.           

Short by: Prajwal / read more at Prajavani

Comments