Skip to main content


ಡೀ ಗ್ಲಾಮರಸ್ ಗೃಹಿಣಿಯಾದ ಹರಿಪ್ರಿಯಾ

ನಟಿ ಹರಿಪ್ರಿಯಾ ದಿನದಿಂದ ದಿನಕ್ಕೆ ಹೆಚ್ಚೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿರುವಂತೆಯೇ ಭಿನ್ನ ಭಿನ್ನ ರೀತಿಯ ಪಾತ್ರಗಳನ್ನೂ ನಿಭಾಯಿಸುತ್ತಿದ್ದಾರೆ. ಇದೀಗ ಸಾಧಾರಣ ಗೃಹಿಣಿ ಪಾತ್ರದಲ್ಲಿ ಅದರಲ್ಲೂ ಡೀ ಗ್ಲಾಮರಸ್ ಆಗಿ 'ಸೂಜಿದಾರ' ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

'ಇದು ಬಟ್ಟೆಗೆ ತೇಪೆ ಹಾಕುವ ಸೂಜಿ ದಾರವಲ್ಲ. ಬದಲಿಗೆ 'ಮೈ ಮನಗಳ ಹೊಲಿಯೋ ಸೂಜಿ ದಾರ! ಹಾಗೂ ಅಲ್ಲದೆ ಈ ಸಿನಿಮಾದಲ್ಲಿ ಸಮಕಾಲೀನ ಸಮಾಜದಲ್ಲಿರುವ ರಾಜಕೀಯ ವಿಡಂಬನೆ, ಸಾಂಸ್ಕೃತಿಕ ವಿಡಂಬನೆ ಸಹ ಇದೆ. ಹಾಗೆಂದು ಇದೇನೂ ಕಲಾತ್ಮಕ ಸಿನಿಮಾ ಅಲ್ಲ. ಪಕ್ಕಾ ಕಮರ್ಷಿಯಲ್ ಸಿನಿಮಾ' ಎನ್ನುತ್ತಾರೆ ನಿರ್ದೇಶಕರು.

ಅಂದಹಾಗೆ ರಂಗಭೂಮಿಯಲ್ಲಿ ಗಣನೀಯವಾಗಿ ಗುರುತಿಸಿಕೊಂಡಿರುವ ಮೌನೇಶ್ ಬಡಿಗೇರ್ `ಸೂಜಿದಾರ' ಚಿತ್ರದ ನಿರ್ದೇಶಕರು.    

short by Pawan / read more at Balkani News

Comments