Skip to main content


ತಿರುಗೇಟು ನೀಡಲು ಭಾರತ ಕಾತರ

ಸತತ ಎರಡು ಪಂದ್ಯಗಳಲ್ಲಿ ಸೋತು ಸರಣಿ ಕೈಚೆಲ್ಲಿರುವ ಭಾರತ ತಂಡ ಈಗ ಅಂತಿಮ ಹಣಾಹಣಿಯಲ್ಲಿ ಗೆದ್ದು ಗೌರವ ಉಳಿಸಿಕೊಳ್ಳುವ ಛಲದಲ್ಲಿದೆ. ಭಾನುವಾರ ನಡೆಯುವ ಹೋರಾಟ ದಲ್ಲಿ ಮಿಥಾಲಿ ರಾಜ್‌ ಬಳಗ ಮೆಗ್‌ ಲ್ಯಾನಿಂಗ್‌ ಸಾರಥ್ಯದ ಆಸ್ಟ್ರೇಲಿಯಾ ಸವಾಲು ಎದುರಿಸಲಿದೆ. 2017ರ ಏಕದಿನ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು ಮಣಿ ಸಿದ್ದ ಭಾರತ, ಅನಂತರ ದಕ್ಷಿಣ ಆಫ್ರಿಕಾ ನೆಲದಲ್ಲಿ ಏಕದಿನ ಮತ್ತು ಟ್ವೆಂಟಿ–20 ಸರಣಿ ಗೆದ್ದು ದಾಖಲೆ ಬರೆದಿತ್ತು. ತವರಿನಲ್ಲಿ ನಡೆಯುತ್ತಿರುವ ಈ ಸರಣಿಯಲ್ಲಿ ಮಿಥಾಲಿ ‍ಪಡೆಗೆ ಗೆಲುವು ಕೈಗೆಟುಕುತ್ತಿಲ್ಲ. ಮೊದಲ ಪಂದ್ಯದಲ್ಲಿ 8 ವಿಕೆಟ್‌ಗಳಿಂದ ಸೋತಿದ್ದ ತಂಡ ಎರಡನೇ ಪಂದ್ಯದಲ್ಲಿ 60ರನ್‌ಗಳಿಂದ ನಿರಾಸೆ ಕಂಡಿತ್ತು. ಹೀಗಾಗಿ ಭಾನುವಾರ ದ ಹೋರಾಟದಲ್ಲಿ ತಂಡ ಆಟದ ಎಲ್ಲಾ ವಿಭಾಗಗಳಲ್ಲೂ ಪರಿಣಾಮಕಾರಿ ಸಾಮರ್ಥ್ಯ ತೋರಬೇಕಿದೆ.             
Short by: Prajwal / read more at Prajavani