Skip to main content


ಪುನೀತ್ ಚಿತ್ರದಿಂದ ಮುಂಬೈ ಮೂಲದ ಪ್ರಿಯಾಂಕ ಔಟ್! ಕನ್ನಡತಿ ರಚಿತಾ ರಾಮ್ ಇನ್!

ಪುನೀತ್ - ಪವನ್ ಒಡೆಯರ್ ಕಾಂಬಿನೇಶನ್ ನ ಹೊಸ ಚಿತ್ರಕ್ಕೆ ನಾಯಕಿಯಾಗಿ ಮುಂಬೈ ಮೂಲದ ಪ್ರಿಯಾಂಕ ಜ್ವಾಲಾಕರ್ ಅವರು ಆಯ್ಕೆ ಆಗಿದ್ದಾರೆ ಎಂದು ಈ ಹಿಂದೆ ನಾವು ವರದಿ ಮಾಡಿದ್ದೆವು. ಆದರೆ ಇದೀಗ ಈಗ ರಾತ್ರೋರಾತ್ರಿ ಚಿತ್ರತಂಡ ಆಕೆಯನ್ನು ಬದಲಾಯಿಸಿ, ನಾಯಕಿ ಸ್ಥಾನಕ್ಕೆ ರಚಿತಾ ರಾಮ್ ಅವರನ್ನು ಆಯ್ಕೆ ಮಾಡಿದ್ದಾರೆ ಎನ್ನುವುದು ವಿಶೇಷ!
ಇದಕ್ಕೆ ಕಾರಣ ಹುಡುಕುತ್ತಾ ಹೋದಾಗ ಸಿಕ್ಕ ಮಾಹಿತಿ ಏನೆಂದರೆ, ಈ ಚಿತ್ರಕ್ಕೆ ಲೋಕಲ್ ಹುಡುಗಿ ಇದ್ದರೆ ಚೆಂದ ಮತ್ತು ಅವರಿಗೆ ಅರ್ಥ ಮಾಡಿಸಿ ಅಭಿನಯವನ್ನೂ ಚೆನ್ನಾಗಿ ತೆಗೆಯಬಹುದು ಎಂಬುವುದು ನಿರ್ದೇಶಕ ಪವನ್ ಒಡೆಯರ್ ಮತ್ತು ಚಿತ್ರತಂಡಕ್ಕೆ ಅನಿಸಿತ್ತಂತೆ. ಈ ಕಾರಣಕ್ಕೆ ಪ್ರಿಯಾಂಕಾ ಅವರನ್ನು ಬದಲಾಯಿಸಿ, ನಾಯಕಿ ಸ್ಥಾನದಲ್ಲಿ ನಮ್ಮ ರಚಿತಾ ರಾಮ್ ಅವರನ್ನು ಕೂರಿಸಲಾಗಿದೆ.
short by Shraman Jain / read more at EeNadu India