Skip to main content


ಇಮ್ರಾನ್ ಸರ್ದಾರಿಯಾ ನಿರ್ದೇಶನದ ಥ್ರಿಲ್ಲರ್ ಚಿತ್ರದಲ್ಲಿ ರಮೇಶ್ ಅರವಿಂದ್ ನಟನೆ!

ಸ್ಯಾಂಡಲ್ವುಡ್ ನ ನಟ, ನಿರ್ದೇಶಕ ರಮೇಶ್ ಅರವಿಂದ್ ಎಷ್ಟು ವರ್ಕೋಹಾಲಿಕ್ ಎಂದರೇ ಒಂದಲ್ಲ ಒಂದು ಚಿತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. 
ನೃತ್ಯ ನಿರ್ದೇಶನದಿಂದ ಸ್ವತಂತ್ರ ನಿರ್ದೇಶನಕ್ಕೆ ಹೊರಳಿದ ಇಮ್ರಾನ್ ಸರ್ದಾರಿಯಾ ಅವರ ಮುಂಬರುವ ಥ್ರಿಲ್ಲಿರ್ ಚಿತ್ರವೊಂದರಲ್ಲಿ ನಟಿಸಲು ರಮೇಶ್ ಅರವಿಂದ್ ಮುಂದಾಗಿದ್ದಾರೆ.  ಇನ್ನು ಇಮ್ರಾನ್ ಸದ್ಯ ಚಿತ್ರಕತೆ ಬರೆಯುವುದರಲ್ಲಿ ಬ್ಯುಸಿಯಾಗಿದ್ದಾರೆ. 2018ರ ದ್ವಿತೀಯಾರ್ಧದಲ್ಲಿ ಚಿತ್ರ ಸೆಟ್ಟೇರುವ ಸಾಧ್ಯತೆ ಇದೆ. ಸದ್ಯ ರಮೇಶ್ ಅರವಿಂದ್ ಹಿಂದಿಯ ಕ್ವೀನ್ ಚಿತ್ರದ ರಿಮೇಕ್ ನಿರ್ದೇಶನದಲ್ಲಿ ತೊಡಗಿಸಿಕೊಂಡಿದ್ದಾರೆ. ದಕ್ಷಿಣ ಭಾರತದ ಮೂರು ಭಾಷೆಗಳಲ್ಲಿ ಚಿತ್ರ ತಯಾರಾಗಲಿದೆ. ಕನ್ನಡದಲ್ಲಿ ಪಾರುಲ್ ಯಾದವ್, ತೆಲುಗಿನಲ್ಲಿ ತಮನ್ನಾ ಭಾಟಿಯಾ ಮತ್ತು ತಮಿಳಿನಲ್ಲಿ ಕಾಜೋಲ್ ಅಗರವಾಲ್ ಅಭಿನಯಿಸುತ್ತಿದ್ದಾರೆ.   
Short by: Pawanraj / read more at Kannada prabha