Skip to main content


ಬಿಎಸ್‍ವೈ, ಈಶ್ವರಪ್ಪ ನಡುವಿನ ಶೀತಲ ಸಮರ ಅಂತ್ಯ- ಅಮಿತ್ ಶಾ ನೇತೃತ್ವದ ಸಂಧಾನ ಸಭೆ ಸಕ್ಸಸ್

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತು ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಇಬ್ಬರ ನಡುವಿನ ಶೀತಲ ಸಮರಕ್ಕೆ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪೂರ್ಣ ವಿರಾಮ ಹಾಕಿದ್ದಾರೆ. ಕೆಎಸ್ ಈಶ್ವರಪ್ಪ ನಿವಾಸದಲ್ಲಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ರಹಸ್ಯ ಮಾತುಕತೆಯಲ್ಲಿ ಅಮಿತ್ ಶಾ ಇಬ್ಬರು ನಾಯಕರ ಮನವೊಲಿಸಿದ್ದಾರೆ ಅಂತಾ ಎನ್ನಲಾಗುತ್ತಿದೆ.

ಈಶ್ವರಪ್ಪ ಮತ್ತು ಯಡಿಯೂರಪ್ಪರ ನಡುವಿನ ಮುನಿಸಿನ ಬಗ್ಗೆ ಮಾಧ್ಯಮಗಳು ಅಮಿತ್ ಶಾರನ್ನು ಪ್ರಶ್ನೆ ಮಾಡಿದಾಗ, ಮತ್ತೊಮ್ಮೆ ಇಬ್ಬರ ಕೈ ಯನ್ನು ಮೇಲಕ್ಕೆತ್ತಿ ಇದೇ ನನ್ನ ಉತ್ತರ ಅಂತಾ ಅಂದ್ರು.     .

short by NP/ read more at Public TV

Comments