Skip to main content


ಡಾ. ರಾಜ್ ಮೊಮ್ಮಗಳ ಸೌಂದರ್ಯಕ್ಕೆ ದಂಗಾದ ನೆಟ್ಟಿಗರು!


ಡಾ. ರಾಜ್ ಕುಮಾರ್ ಅವರ ಕುಟುಂಬದಿಂದ ಒಬ್ಬೊಬ್ಬರೇ ಸಿನಿಮಾ ಇಂಡಸ್ಟ್ರಿ ಕಡೆ ಮುಖ ಮಾಡ್ತಿದ್ದಾರೆ. ರಾಜ್ ಪುತ್ರರ ನಂತರ ರಾಜ್ ಮೊಮ್ಮಕ್ಕಳ ಜಮಾನ ಅರಂಭವಾಗಿದೆ. ಅಣ್ಣಾವ್ರ ಪುತ್ರಿ ಪೂರ್ಣಿಮಾ ಮತ್ತು ನಟ ರಾಮ್ ಕುಮಾರ್ ದಂಪತಿಯ ಪುತ್ರ ಧೀರೆನ್ ರಾಮ್ ಕುಮಾರ್ ಅವರು ಚಿತ್ರರಂಗ ಪ್ರವೇಶ ಮಾಡಲು ಸಜ್ಜಾಗಿದ್ದು, ಫೋಟೋಶೂಟ್ ಮಾಡಿಸಿದ್ದರು. ಇದೀಗ ಅವರ ತಂಗಿ ಧನ್ಯ ರಾಮ್ ಕುಮಾರ್ ಸರಧಿ. ಹೌದು, ರಾಮ್ ಕುಮಾರ್ ಪುತ್ರಿ ಧನ್ಯ ಅವರ ಗ್ಲಾಮರಸ್ ಫೋಟೋಶೂಟ್ ಸ್ಟಿಲ್ಸ್ ಗಳು ಸಿಕ್ಕಾಪಟ್ಟೆ ವೈರಲ್ ಆಗಿದ್ದು, ನೆಟ್ಟಿಗರಿಂದ ಪ್ರಶಂಸೆ ವ್ಯಕ್ತವಾಗಿದೆ. ಇನ್ನು ಫೋಟೋ ವೈರಲ್ ಆದ ಸ್ವಲ್ಪ ಹೊತ್ತಿನಲ್ಲೇ ಧನ್ಯ ಅವರು ಚ್ಯಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಆದ್ರೆ, ಇದು ಯಾವುದು ಖಚಿತವಾಗಿಲ್ಲ.

short by Shraman Jain / read more at Filmibeat Kannada