Skip to main content


'ಹುಚ್ಚ ೧' ನಿಂದ 'ಹುಚ್ಚ ೨' ಚಿತ್ರದ ಆಡಿಯೋ ರಿಲೀಸ್!

ಕನ್ನಡ ಚಿತ್ರರಂಗದಲ್ಲಿ ಹೊಸ ಆಧ್ಯಾಯ ಬರೆದ, ನಮ್ಮ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ಒಂದು ದೊಡ್ಡ ಮಟ್ಟದ ಬ್ರೇಕ್ ಕೊಟ್ಟಂತಹ ಚಿತ್ರ 'ಹುಚ್ಚ'.

ಇದೀಗ ಈ ಚಿತ್ರದ ಸೀಕ್ವೆಲ್, ಅಂದರೆ 'ಹುಚ್ಚ ೨' ಚಿತ್ರ ಇದೀಗ ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರವನ್ನು 'ಹುಚ್ಚ' ಚಿತ್ರ ನಿರ್ದೇಶಿಸಿದ, ಪ್ರಖ್ಯಾತ ನಿರ್ದೇಶಕ ಎನ್. ಓಂ ಪ್ರಕಾಶ್ ರಾವ್ ಅವರೇ ನಿರ್ದೇಶಿಸಿದ್ದಾರೆ. ಇತ್ತೀಚೆಗಷ್ಟೇ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ.


ಇದೀಗ ಚಿತ್ರತಂಡ ಧ್ವನಿಸುರುಳಿ ಬಿಡುಗಡೆಗೆ ಸಜ್ಜಾಗಿದ್ದು, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಂದ ನಾಳೆ ಅನೂಪ್ ಸೀಳಿನ್ ಸಂಯೋಜಿಸಿರುವ ಹಾಡುಗಳು ಬಿಡುಗಡೆಯಾಗಲಿವೆ.

ಅಂದಹಾಗೆ, ಡಾರ್ಲಿಂಗ್ ಕೃಷ್ಣ ಈ ಚಿತ್ರದ ನಾಯಕನಾಗಿದ್ದು, ಶ್ರಾವ್ಯ ನಾಯಕಿ. ಇನ್ನು ಪ್ರಮುಖ ಪಾತ್ರಗಳಲ್ಲಿ ಸಾಯಿ ಕುಮಾರ್, ಅವಿನಾಶ್, ಓಂ ಪ್ರಕಾಶ್, ಮತ್ತು ಇನ್ನಿತರರು ಅಭಿನಯಿಸಿದ್ದಾರೆ.

By: Shraman Jain.