Skip to main content


ಯೂಟ್ಯೂಬ್ ಟ್ರೆಂಡಿಂಗ್ನಲ್ಲಿ NO.1 ಸ್ಥಾನದಲ್ಲಿದೆ, ಅವೆಂಜರ್ಸ್: ಇನ್ಫಿನಿಟಿ ವಾರ್: ಟ್ರೈಲರ್..

ಅಮೇರಿಕನ್ ಸೂಪರ್ ಹೀರೋ ಚಿತ್ರವನ್ನ ಆಧರಿಸಿ ಮೂಡಿ ಬರುತ್ತಿರುವ ಹಾಲಿವುಡ್ ನ ಬಹುನಿರೀಕ್ಷೆಯ 'ಅವೆಂಜರ್ಸ್: ಇನ್ಫಿನಿಟಿ ವಾರ್' ಚಿತ್ರದ ಕೊನೆಯ ಟ್ರೈಲರ್ ಬಿಡುಗಡೆಯಾಗಿದೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ 19 ಮಿಲಿಯನ್ ವೀಕ್ಷಕರು ಈ ಚಿತ್ರದ ಟ್ರೈಲರ್ ವೀಕ್ಷಿಸಿದ್ದಾರೆ. ದೊಡ್ಡ ಸದ್ದು ಮಾಡುತ್ತಿರುವ ಸಿನಿಮಾ ಪ್ರೇಕ್ಷಕರ ಥ್ರಿಲ್ ಹೆಚ್ಚಿಸಿದೆ.
ಸದ್ಯ, ಸಂಪೂರ್ಣವಾಗಿ ಶೂಟಿಂಗ್ ಮುಗಿಸಿರುವ 'ಅವೆಂಜರ್ಸ್: ಇನ್ಫಿನಿಟಿ ವಾರ್' ಏಪ್ರಿಲ್ 27 ರಂದು ತೆರೆಕಾಣಲಿದೆ. ಇಲ್ಲಿ ಗಮನಿಸಬೇಕಾದ ವಿಚಾರವಂದ್ರೆ ಅದೇ ದಿನ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 'ಕಾಲ ಕರಿಕಾಳನ್' ಸಿನಿಮಾ ವರ್ಲ್ಡ್ ವೈಡ್ ಬಿಡುಗಡೆಯಾಗಲಿದೆ.
short by: SP / read more at FilmiBeat