Skip to main content


ಅಭಿಮಾನಗಳೊಂದಿಗೆ ಟಗರು ಚಿತ್ರ ವೀಕ್ಷಿಸಿದ ರಾಕಿಂಗ್ ಸ್ಟಾರ್!


ರಾಕಿಂಗ್ ಸ್ಟಾರ್ ಯಶ್ ನಗರದ ಓರಾಯನ್ ಮಾಲ್ ನಲ್ಲಿ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ ಟಗರು ಸಿನಿಮಾ ನೋಡಿದ್ದಾರೆ. ಈ ಸಂದರ್ಭದಲ್ಲಿ ಟಗರು ಸಿನಿಮಾ ನಿರ್ಮಾಪಕ ಕೆ.ಪಿ ಶ್ರೀಕಾಂತ್, ಫಿಟ್‍ನೆಸ್ ಟ್ರೇನರ್ ಪಾನಿಪುರಿ ಕಿಟ್ಟಿ ಸೇರಿದಂತೆ ಹಲವರು ಯಶ್‍ಗೆ ಸಾಥ್ ಕೊಟ್ಟರು.

 

ಅಭಿಮಾನಗಳ ಜೊತೆ ಚಿತ್ರ ನೋಡಿದ ಯಶ್, ಚಿತ್ರಗಳನ್ನು ನೋಡಿದ್ದೇನೆ, ಆದರೆ ಈ ರೀತಿಯ ಸ್ಕ್ರೀನ್ ಪ್ಲೇ ನೋಡ್ತಾ ಇರೋದು ಇದೇ ಮೊದಲು. ಚಿತ್ರದ ಹಾಡುಗಳು, ಸ್ಕ್ರೀನ್ ಪ್ಲೇ, ಡೈರೆಕ್ಶನ್ ಎಲ್ಲವೂ ವಿಭಿನ್ನವಾಗಿದ್ದು, ನೆಕ್ಸ್ಟ್ ಲೇವಲ್ ನಲ್ಲಿದೆ ಎಂದು ಯಶ್ ತಿಳಿಸಿದ್ದಾರೆ.


ಸದ್ಯ ಟಗರು ಚಿತ್ರ ಕರ್ನಾಟಕದಾದ್ಯಂತ ಯಶಸ್ವಿಗೊಂಡಿದ್ದು, ಈಗ ವಿದೇಶದಲ್ಲೂ ರಾರಾಜಿಸುತ್ತಿದೆ. ಯು.ಎಸ್.ಎಯ ಶಿಕಾಗೋ, ಫಿಲಡೆಲ್ಫಿಯ ಸೇರಿದಂತೆ 25ಕ್ಕೂ ಹೆಚ್ಚು ಕಡೆ ಸಿನಿಮಾ ಬಿಡುಗಡೆಯಾಗಿದೆ.


short by Shraman Jain / more at Public TV