Skip to main content


ಎಂಜಿನ್ ಇಲ್ಲದೇ 10 ಕಿಮೀ ಓಡಿದ ರೈಲು, 7 ಮಂದಿ ಸಿಬ್ಬಂದಿ ಸಸ್ಪೆಂಡ್

ಒಡಿಶಾದಲ್ಲಿ ಪ್ರಯಾಣಿಕರ ರೈಲೊಂದು ಎಂಜಿನ್ ಇಲ್ಲದೇ 10 ಕಿ.ಮೀ. ದೂರ ಚಲಿಸಿದ ಇರಿಸುಮುರಿಸಿನ ಪ್ರಸಂಗ ನಡೆದ ಬೆನ್ನಲ್ಲೇ ರೈಲ್ವೆ ಇಲಾಖೆಯ ಏಳು ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ನಿನ್ನೆ ತಡ ರಾತ್ರಿ ಬಾಲಂಗಿರ್ ಜಿಲ್ಲೆಯ ಟಿಟ್ಲಾಗಢ್‍ನಲ್ಲಿ ಅಹಮದಾಬಾದ್-ಪುರಿ ಮಾರ್ಗದ ಎಕ್ಸ್ ಪ್ರೆಸ್ ರೈಲಿನ ಬೋಗಿಗಳು ಎಂಜಿನ್ ಇಲ್ಲದೇ ಚಲಿಸಿದ ಸಂಗತಿ ಮಾಧ್ಯಮಗಳಲ್ಲಿ ಸುದ್ದಿಯಾದ ನಂತರ ಈವರೆಗೆ ಒಟ್ಟು ಏಳು ಸಿಬ್ಬಂದಿಯನ್ನು ಸಸ್ಪೆಂಡ್ ಮಾಡಲಾಗಿದೆ. ಎಂಜಿನ್‍ನಿಂದ ಬೇರ್ಪಟ್ಟ ಬೋಗಿಗಳು ಚಲಿಸಿದ ವಿಷಯ ತಿಳಿದ ನಂತರ ನಿನ್ನೆ ಮಧ್ಯರಾತ್ರಿಯೇ ಇಬ್ಬರನ್ನು ಸಸ್ಪೆಂಡ್ ಮಾಡಲಾಗಿತ್ತು.

short by: Nithin / read more at Eesanje 

Comments